ಲೋಕಬಂಧು ನ್ಯೂಸ್, ಉಡುಪಿ
ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಆಶ್ರಯದಲ್ಲಿ ಡಾ.ಶಿವರಾಮ ಕಾರಂತ ಟ್ರಸ್ಟ್, ಮಾಹೆ ಮಣಿಪಾಲ, ಮಣಿಪಾಲ್ ಇನ್‌ಸ್ಟಿಟ್ಯೂಟ್ ಆಫ್ ಸೋಶಿಯಲ್ ಸೈನ್ಸಸ್, ಹ್ಯುಮಾನಿಟೀಸ್ ಮತ್ತು ಆರ್ಟ್ಸ್ ಹಾಗೂ ಭಾಷಾ ವಿಭಾಗ ಕನ್ನಡ ಮತ್ತು ಪ್ರಾದೇಶಿಕ ಭಾಷೆಗಳ ಕೇಂದ್ರ ಮಣಿಪಾಲ ಸಹಯೋಗದೊಂದಿಗೆ ಫೆ.16ರಂದು ಮಣಿಪಾಲದ ಮಾಹೆಯಲ್ಲಿ `ಸಿನೆಮಾಗಳ ಮೂಲಕ ಶಿವರಾಮ ಕಾರಂತರು' ಕಾರ್ಯಕ್ರಮ ನಡೆಯಲಿದೆ.ಅಂದು ಬೆಳಿಗ್ಗೆ 10ರಿಂದ ನಡೆಯುವ ಕಾರ್ಯಕ್ರಮದಲ್ಲಿ 'ಚೋಮನ ದುಡಿ' ಚಲನಚಿತ್ರದ ಪ್ರದರ್ಶನ, ಅಪರಾಹ್ನ 1.30ರಿಂದ 'ಮೂಕಜ್ಜಿಯ ಕನಸುಗಳು' ಪ್ರದರ್ಶನ ಇದೆ. ಈ ಎರಡೂ ಚಲನಚಿತ್ರಗಳ ಕುರಿತಂತೆ ಸಿನೆಮಾ ನಿರ್ದೇಶಕರಾದ ಗಿರೀಶ ಕಾಸರವಳ್ಳಿ ಮತ್ತು ಪಿ.ಶೇಷಾದ್ರಿ ಜೊತೆ ಸಂವಾದ ಏರ್ಪಡಿಸಲಾಗಿದೆ.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿಗಳು ಹೆಚ್ಚಿನ ಸಂಖ್ಯೆಯಲ್ಲಿ ಭಾಗವಹಿಸಬೇಕೆನ್ನುವುದು ಸಂಘಟಕರ ಅಪೇಕ್ಷೆ. ಪ್ರವೇಶ ಉಚಿತವಾಗಿದ್ದು, ನೋಂದಣಿಗಾಗಿ 6362517472ನ್ನು ಸಂಪರ್ಕಿಸುವಂತೆ ಡಾ.ಶಿವರಾಮ ಕಾರಂತ ಟ್ರಸ್ಟ್ ಪ್ರಕಟನೆ ತಿಳಿಸಿದೆ.