ಲೋಕಬಂಧು ನ್ಯೂಸ್, ಉಡುಪಿ
ತೆಂಕನಿಡಿಯೂರು ಗ್ರಾಮದಲ್ಲಿ 58.50 ಲಕ್ಷ ರೂ. ವೆಚ್ಚದ ವಿವಿಧ ರಸ್ತೆ ಅಭಿವೃದ್ಧಿ ಕಾಮಗಾರಿಗಳಿಗೆ ಉಡುಪಿ ಶಾಸಕ ಯಶಪಾಲ್ ಸುವರ್ಣ ಫೆಬ್ರವರಿ 6ರಂದು ಶುಕ್ರವಾರ ಗುದ್ದಲಿಪೂಜೆ ನೆರವೇರಿಸಿ ಚಾಲನೆ ನೀಡಿದರು.
ಬಳಿಕ ಮಾತನಾಡಿದ ಅವರು, ತೆಂಕನಿಡಿಯೂರು ಗ್ರಾಮದ ಜನತೆಯ ಬಹುದಿನದ ಬೇಡಿಕೆಯಾಗಿದ್ದ ಬೈಲಕೆರೆ ನಾಗಬನ ಬಳಿ ರಸ್ತೆ ಅಭಿವೃದ್ಧಿಗೆ 20 ಲಕ್ಷ, ಕೆಳಾರ್ಕಳಬೆಟ್ಟು ಭೋಜರಾಜ ಕಂಪೌಂಡ್ ಕೊಜಕುಳಿ ಒಳರಸ್ತೆ ಅಭಿವೃದ್ಧಿ ಕಾಮಗಾರಿಗೆ 15 ಲಕ್ಷ, ಅಂಬಿಕಾ ವೈಟ್ ರಸ್ತೆ ಹಾಗೂ ಲಕ್ಷ್ಮೀನಗರ 9ನೇ ಕ್ರಾಸ್ ರಸ್ತೆ ಅಭಿವೃದ್ಧಿಗೆ 15 ಲಕ್ಷ ಅನುದಾನ ಒದಗಿಸಿ ಕಾಮಗಾರಿಗೆ ಚಾಲನೆ ನೀಡಲಾಗಿದ್ದು, ಪ್ರಗತಿ ಲೇಔಟ್'ನಲ್ಲಿ 8.50 ಲಕ್ಷ ರೂ. ವೆಚ್ಚದಲ್ಲಿ ನಿರ್ಮಾಣಗೊಂಡ ಕಾಂಕ್ರಿಟ್ ರಸ್ತೆಯ ಉದ್ಘಾಟನೆ ನಡೆಸಲಾಗಿದೆ.
ಈ ಸಂದರ್ಭದಲ್ಲಿ ಸ್ಥಳೀಯ ಮುಖಂಡರಾದ ಶರತ್ ಬೈಲಕೆರೆ, ವಿಜಯ ಪ್ರಕಾಶ್, ವಿನೋದ್ ಸುವರ್ಣ, ಚರಣ್ ರಾಜ್, ಅರುಣ್ ಜತ್ತನ್, ಸತೀಶ್ ಬೈಲಕೆರೆ, ಕೃಷ್ಣ ಶೆಟ್ಟಿ, ಗಾಯತ್ರಿ, ಮಾಲಿನಿ ಜತ್ತನ್, ಶಾಲಿನಿ, ಪುಷ್ಪ, ಪ್ರಶಾಂತ್ ಹೆಬ್ಬಾರ್, ರೇಖಾ, ಗೀತಾ ಶೆಟ್ಟಿ ಸ್ಥಳೀಯರು ಉಪಸ್ಥಿತರಿದ್ದರು.
.jpg)
.jpg)