ಲೋಕಬಂಧು ನ್ಯೂಸ್, ಉಡುಪಿ
'ಉಡುಪಿಗೆ ಬನ್ನಿ' ತಂಡದ ನೇತೃತ್ವದಲ್ಲಿ ಕಟಪಾಡಿ ಸಮೀಪದ ಪಿತ್ರೋಡಿ ಹಾಗೂ ಮಟ್ಟು ಪರಿಸರದಲ್ಲಿ ಹಕ್ಕಿ ವೀಕ್ಷಣೆ ಕಾರ್ಯಕ್ರಮ ನಡೆಯಿತು.ಸುಮಾರು ಒಂದೂವರೆ ಗಂಟೆ ಕಾಲ ಪರಿಸರಾಸಕ್ತರು ಕಾಲ್ನಡಿಗೆ ಮೂಲಕ ಸುತ್ತಮುತ್ತಲಿನ ಪರಿಸರದಲ್ಲಿ 23 ಪ್ರಬೇಧಗಳ 219 ಪಕ್ಷಿಗಳನ್ನು ಪಟ್ಟಿ ಮಾಡಿದರು.
ಅದರಲ್ಲಿ ಬ್ಲಾಕ್ ಹೆಡೆಡ್ ಐಬಿಸ್, ಗುಲಾಬಿ ಕೊರಳಿನ ಗಿಳಿ, ಸಣ್ಣ ಕುಟ್ರ, ಕಾಡು ಗೊರವಂಕ, ಚುಕ್ಕೆ ಬೆಳವ, ಗದ್ದೆ ಮಿಂಚುಳ್ಳಿ, ನೀಲಿ ಮಿಂಚುಳ್ಳಿ, ಕೆಂಪು ಟಿಟ್ಟಿಬ, ದೊಡ್ಡ ಬೆಳ್ಳಕ್ಕಿ, ಕೊಳದ ಬಕ, ಸಣ್ಣ ಕಳ್ಳಿಪೀರ, ಗದ್ದೆ ಗೊರವ, ಗಲ್ ಸೇರಿದಂತೆ 23 ಪ್ರಬೇಧಗಳು ಒಳಗೊಂಡಿವೆ.
ಬಳಿಕ ಮಟ್ಟು ಗುಳ್ಳ ಬೆಳೆಗಾರರ ಜೊತೆ ಸಂವಾದ ನಡೆಯಿತು. ಮಟ್ಟುಗುಳ್ಳ ಬೆಳೆಗಾರರ ಸಂಘದ ಪ್ರಬಂಧಕ ಮಟ್ಟು ಲಕ್ಷ್ಮಣ್, ಗಿರೀಶ್ ಆಚಾರ್, ಪ್ರತಿಮಾ ಆಚಾರ್, ಮೇಧಾ ನಾಯಕ್, ರಮ್ಯಾ ಕಾಮತ್, ರಾಜಶ್ರೀ ಎಸ್., ವೈಭವ್ ಯಡಿಯಾಳ್, ವಿದ್ಯಾಶ್ರೀ ಎಸ್., ಪ್ರಸನ್ನ ಉದ್ಯಾವರ ಉಪಸ್ಥಿತರಿದ್ದರು.
ಡಾ. ಗಣೇಶ್ ಪ್ರಸಾದ್ ಜಿ. ನಾಯಕ್ ಸ್ವಾಗತಿಸಿ, ಕಾರ್ಯಕ್ರಮ ಸಂಯೋಜಿಸಿದ್ದರು.