ಲೋಕಬಂಧು ನ್ಯೂಸ್, ಉಡುಪಿ
ಇಲ್ಲಿನ ಆರ್ಟಿಸ್ಟ್ಸ್ ಫೋರಮ್ ಸದಸ್ಯರ ಚಿತ್ರಕಲೆ ಮತ್ತು ಛಾಯಾಚಿತ್ರ ಕೃತಿಗಳ ಸಂಯುಕ್ತ ಪ್ರದರ್ಶನ 'ಪಯಣ' ಈ ತಿಂಗಳ 28ರಿಂದ ಮಾ. 2ರ ವರೆಗೆ ಅಲಂಕಾರ್ ಥಿಯೇಟರ್ ಹಿಂಭಾಗದಲ್ಲಿರುವ ಗ್ಯಾಲರಿ 'ದೃಷ್ಟಿ'ಯಲ್ಲಿ ಆಯೋಜಿಸಲಾಗಿದೆ. ಪ್ರದರ್ಶನವು ಪ್ರತಿದಿನ ಬೆಳಿಗ್ಗೆ 10ರಿಂದ ಸಂಜೆ 7ರ ವರೆಗೆ ಸಾರ್ವಜನಿಕರಿಗೆ ಮುಕ್ತವಾಗಿದೆ ಎಂದು ಫೋರಮ್ ಅಧ್ಯಕ್ಷ ರಮೇಶ್ ರಾವ್ ಮಂಗಳವಾರ ಸುದ್ದಿಗೋಷ್ಟಿಯಲ್ಲಿ ತಿಳಿಸಿದರು.ಪ್ರದರ್ಶನವನ್ನು ಫೆ.28ರಂದು ಸಂಜೆ 5 ಗಂಟೆಗೆ ಮಂಗಳೂರು ವಿಶ್ವವಿದ್ಯಾಲಯದ ಕುಲಪತಿ ಪ್ರೊ.ಪಿ.ಎಲ್. ಧರ್ಮ ಉದ್ಘಾಟಿಸುವರು. ಗೌರವ ಅತಿಥಿಗಳಾಗಿ ಸಿವಿಲ್ ಎಂಜಿನಿಯರ್ಸ್ ಅಸೋಸಿಯೇಶನ್ ಅಧ್ಯಕ್ಷ ಕೆ. ರಂಜನ್, ಉಡುಪಿ ಜಿಲ್ಲಾ ಅಥ್ಲೆಟಿಕ್ಸ್ ಅಸೋಸಿಯೇಶನ್ ಅಧ್ಯಕ್ಷ ಹರಿಪ್ರಸಾದ್ ರೈ ಮತ್ತು ಮಂಗಳೂರು ಫಿಶರೀಸ್ ಕಾಲೇಜಿನ ಮಾಜಿ ಡೀನ್ ಡಾ. ಎಸ್.ಎಂ. ಶಿವಪ್ರಕಾಶ್ ಆಗಮಿಸುವರು. ಆರ್ಟಿಸ್ಟ್ಸ್ ಫೋರಮ್ ಅಧ್ಯಕ್ಷ ರಮೇಶ್ ರಾವ್ ಅಧ್ಯಕ್ಷತೆ ವಹಿಸುವರು ಎಂದು ಫೋರಮ್ ಕಾರ್ಯದರ್ಶಿ ಸಕು ಪಾಂಗಾಳ ತಿಳಿಸಿದರು.
ಪ್ರದರ್ಶನದಲ್ಲಿ ರಮೇಶ್ ರಾವ್, ಸಕು ಪಾಂಗಾಳ, ಲಿಯಾಕತ್ ಅಲಿ, ಖರ್ಷಿದ್ ಯಾಕುಬ್, ಸೀತಾರಾಮ ರಾವ್, ಜನಾರ್ದನ ಹಾವಂಜೆ, ಜೀವನ್ ಶೆಟ್ಟಿ, ಪ್ರಸಾದ್ ರಾವ್ ಜಿ., ಮಂಜುನಾಥ ಮಯ್ಯ, ರೇಶ್ಮಾ ಶೆಟ್ಟಿ, ಶ್ರೀನಾಥ ಮಣಿಪಾಲ, ಸಪ್ನಾ ನೊರೊನ್ಹಾ, ಗಣೇಶ್ ಕುಕ್ಕೆಹಳ್ಳಿ, ಮೋನಪ್ಪ ಎಚ್.ಎಸ್., ಥಾಮಸ್ ಎಂ.ಜೆ., ಪವನ್ ಕುಮಾರ್ ಅತ್ತಾವರ, ಸ್ನೇಹಾ ಸುಬ್ರಹ್ಮಣ್ಯ, ಎಚ್.ಕೆ. ರಾಮಚಂದ್ರ, ಡಾ.ಕಿರಣ್ ಆಚಾರ್ಯ, ಸಂತೋಷ್ ಪೈ, ಅಭಿಷೇಕ್ ತಲ್ವಾಲ್ಕರ್, ಜಯವಂತ್, ಸತೀಶ್ಚಂದ್ರ, ರವಿ ಹಿರೆಬೆಟ್ಟು, ವಸಂತ ಹೆಬ್ರಿ, ಆಸ್ಟ್ರೋ ಮೋಹನ್, ಪ್ರವೀಣಾ ಮೋಹನ್ ಸೇರಿದಂತೆ ಹಲವು ಮಂದಿ ಕಲಾವಿದರ ಕೃತಿಗಳು ಪ್ರದರ್ಶಿಲ್ಪಡಲಿವೆ.