ಸಾಹಿತಿ ಕೋಟ ಶಿವಾನಂದ ಕಾರಂತ ನಿಧನ

ಲೋಕಬಂಧು ನ್ಯೂಸ್, ಕುಂದಾಪುರ
ಹಿರಿಯ ಸಾಹಿತಿ, ಲೇಖಕ ಹಾಗೂ ಅಂಕಣಕಾರ ಕೋ. ಶಿವಾನಂದ ಕಾರಂತ ವಯೋಸಹಜ ಕಾಯಿಲೆಯಿಂದ ಫೆ.11ರಂದು ನಿಧನರಾದರು.ಅವರಿಗೆ 80 ವರ್ಷ ವಯಸ್ಸಾಗಿತ್ತು.
ಕಾರಂತ ಅವರಿಗೆ ಪತ್ನಿ ಹಾಗೂ ಪುತ್ರಿ ಇದ್ದಾರೆ.


ಕುಂದಾಪುರ ಸಮೀಪದ ಕೋಣಿಯವರಾದ ಶಿವಾನಂದ ಕಾರಂತ 1946ರ  ಆ.30ರಂದು ಜನಿಸಿದ್ದರು. ಲೇಖಕ, ಸಾಹಿತಿಯಾಗಿ ಮಾತ್ರವಲ್ಲದೆ ಸಾಮಾಜಿಕ ಮತ್ತು ಸಾಂಸ್ಕೃತಿಕ ರಂಗದಲ್ಲಿ ಅವರು ಸಕ್ರಿಯರಾಗಿದ್ದರು.


ಕುಂದಾಪುರದ 'ಕುಂದಪ್ರಭ' ಪತ್ರಿಕೆಯಲ್ಲಿ ಅವರು 3 ದಶಕಗಳ ಕಾಲ ಅಂಕಣಕಾರರಾಗಿ ಜನಪ್ರಿಯರಾಗಿದ್ದರು. ಗಂಗೊಳ್ಳಿ ಎಸ್‌.ವಿ. ಪಿಯು ಕಾಲೇಜಿನಲ್ಲಿ ಉಪನ್ಯಾಸಕರಾಗಿ ನಾಲ್ಕು ದಶಕಗಳ ಕಾಲ ಸೇವೆ ಸಲ್ಲಿಸಿ, ನಿವೃತ್ತಿ ಬಳಿಕ ಸಾಂಸ್ಕೃತಿಕ ಮತ್ತು ಸಾಹಿತ್ಯ ಚಟುವಟಿಕೆಗಳಲ್ಲಿ ಸಕ್ರಿಯರಾಗಿದ್ದರು. ಭಾಷಣಕಾರರಾಗಿ, ನಾಟಕ ನಿರ್ದೇಶಕ ರಾಗಿಯೂ ಗುರುತಿಸಿಕೊಂಡಿದ್ದರು.


ಇದುವರೆಗೆ 10ಕ್ಕೂ ಹೆಚ್ಚು ಕೃತಿಗಳನ್ನು ಪ್ರಕಟಿಸಿದ್ದಾರೆ. ಅಪ್ರಮೇಯ, ಅನಾಮಿಕ, ಅನಿಮಿಷ, ಅರಿವಿನ ಆನಂದ, ಸಂಜೆಗತ್ತಲಲ್ಲಿ ಬಕುಳವೃಕ್ಷ, ಕಲ್ಪನೆಯ ಕಡಲು, ಹಳೆ ತಲೆಮಾರಿನವರು ಮೊದಲಾದವು ಪ್ರಮುಖವಾದವುಗಳು.


2023ರಲ್ಲಿ ಗಂಗೊಳ್ಳಿಯಲ್ಲಿ ನಡೆದ 18ನೇ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರಾಗಿದ್ದರು.


ಸಂತಾಪ
ಕಾರಂತರ ನಿಧನಕ್ಕೆ ಸಂಸದ ಕೋಟ ಶ್ರೀನಿವಾಸ ಪೂಜಾರಿ, ಕುಂದಾಪುರ ಶಾಸಸ ಕಿರಣ್ ಕುಮಾರ್ ಕೊಡ್ಡಿ, ಕಸಾಪ ಜಿಲ್ಲಾಧ್ಯಕ್ಷ
 ನೀಲಾವರ ಸುರೇಂದ್ರ ಅಡಿಗ ಮೊದಲಾದವರು ಸಂತಾಪ ವ್ಯಕ್ತಪಡಿಸಿದ್ದಾರೆ.