ಲೋಕಬಂಧು ನ್ಯೂಸ್, ಶಿರಸಿ
ಶ್ರೀಲಂಕಾದ ಕೊಲೊಂಬೊದಲ್ಲಿ ಇತ್ತೀಚೆಗೆ ನಡೆದ ಪ್ರತಿಷ್ಠಿತ 'ಐರನ್ ಮ್ಯಾನ್ 70.3' ಟ್ರಯಾಫ್ಲಾನ್ ಸ್ಪರ್ಧೆಯಲ್ಲಿ ಶಶಿಭೂಷಣ ಹೆಗಡೆ ದೊಡ್ಡನೆ ಅತ್ಯಂತ ಯಶಸ್ವಿಯಾಗಿ ಗುರಿ ತಲುಪಿ ಗಮನಾರ್ಹ ಸಾಧನೆ ಮಾಡಿದ್ದಾರೆ.
ಶಶಿಭೂಷಣ ಅವರು ಕೇವಲ 6 ಗಂಟೆ 48 ನಿಮಿಷಗಳಲ್ಲಿ ಪೂರ್ಣಗೊಳಿಸಿ, ತನ್ನ ಅದ್ಭುತ ಫಿಟೈಸ್ ಮತ್ತು ದೃಢ ಸಂಕಲ್ಪವನ್ನು ಪ್ರದರ್ಶಿಸಿದ್ದಾರೆ. ಒಟ್ಟು (70.3 113 : ) ದೂರದ ಈ ಕಠಿನ ಪಥವನ್ನು ಶಶಿಭೂಷಣ ಮೂರು ಹಂತಗಳಲ್ಲಿ ಯಶಸ್ವಿಯಾಗಿ ಕ್ರಮಿಸಿದರು. ಸಮುದ್ರದಲ್ಲಿ 1.9 ಕಿ.ಮೀ ಈಜುವ ಮೂಲಕ ಸವಾಲನ್ನು ಆರಂಭಿಸಿದರು. ಈಜಿನ ಬೆನ್ನಲ್ಲೇ 90 ಕಿ.ಮೀ ದೂರದ ಸೈಕ್ಲಿಂಗ್ ಪೂರೈಸಿದರು. ಅಂತಿಮವಾಗಿ 21.1 ಕಿ.ಮೀ. ದೂರದ ಅರ್ಧ ಮ್ಯಾರಥಾನ್ ಓಟ ಪೂರ್ಣಗೊಳಿಸಿ ಫಿನಿಶಿಂಗ್ ಲೈನ್ ತಲುಪಿದರು. ಈ ಸ್ಪರ್ಧೆಯನ್ನು ಪೂರ್ಣಗೊಳಿಸಲು ನಿಗದಿಪಡಿಸಿದ ಗರಿಷ್ಠ ಸಮಯ 8 ಗಂಟೆ 30 ನಿಮಿಷಗಳಾಗಿದ್ದು, ಅದಕ್ಕಿಂತಲೂ ಮುಂಚಿತವಾಗಿ ಗುರಿ ತಲುಪಿದ ಅವರ ಸಾಧನೆ ಗಮನಾರ್ಹವಾದುದು.
ವರ್ಲ್ಡ್ ಟ್ರಯಾಫ್ಲಾನ್ ಕಾರ್ಪೊರೇಷನ್ ಆಯೋಜಿಸುವ ಸ್ಪರ್ಧೆಯನ್ನು ಪೂರ್ಣಗೊಳಿಸುವವರಿಗೆ ಜಾಗತಿಕವಾಗಿ 'ಐರನ್ ಮ್ಯಾನ್' ಎಂಬ ಗೌರವದ ಬಿರುದು ಲಭಿಸುತ್ತದೆ. ಈ ಹಿನ್ನೆಲೆಯಲ್ಲಿ ಶಶಿಭೂಷಣ ಹೆಗಡೆ ದೊಡ್ಮನೆ ಪ್ರತಿಕ್ರಿಯಿಸಿ ಐರನ್ ಮ್ಯಾನ್ 70.3 ಕೇವಲ ದೈಹಿಕ ಶಕ್ತಿಯಲ್ಲ, ಇದು ಮಾನಸಿಕ ಸ್ಥೈರ್ಯ ಮತ್ತು ಶಿಸ್ತಿನ ತರಬೇತಿಯ ಫಲ ಎಂದಿದ್ದಾರೆ.
ಶಶಿಭೂಷಣ ಹೆಗಡೆ ಮಾಜಿ ಮುಖ್ಯಮಂತ್ರಿ ರಾಮಕೃಷ್ಣ ಹೆಗಡೆಯವರ ಮೊಮ್ಮಗ.