ಆಯುರ್ವೇದ ಸಂಶೋಧನೆಗಾಗಿ ದೇಹ ದಾನ

ಲೋಕಬಂಧು ನ್ಯೂಸ್, ಉಡುಪಿ
ವಿದ್ಯಾದಾನವನ್ನು ಶ್ರೇಷ್ಠ ದಾನವೆಂದು ನಂಬಿರುವ ವ್ಯಕ್ತಿಯೋರ್ವರು ಆಯುರ್ವೇದ ಸಂಶೋಧನೆಗಾಗಿ ಉಡುಪಿ ಎಸ್.ಡಿ.ಎಂ‌. ವಿದ್ಯಾಸಂಸ್ಥೆಗೆ ದೇಹ ದಾನ ಮಾಡಿದ್ದಾರೆ.ಕುಂದಾಪುರ ಕೋಟೇಶ್ವರದ ದಿ.ಅನಂತಪದ್ಮನಾಭ (69.) ದೇಹ ದಾನ ಮಾಡಿದ್ದು, ಮೃತರ ಸ್ವ-ಇಚ್ಛೆಯಂತೆ ಅವರ ಕುಟುಂಬದವರು ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಆಯುರ್ವೇದ ಮಹಾವಿದ್ಯಾಲಯದ ಶರೀರ ರಚನಾ ವಿಭಾಗಕ್ಕೆ ದೇಹ ದಾನ ಮಾಡಿದ್ದಾರೆ.


ಎಸ್.ಡಿ.ಎಮ್. ವಿದ್ಯಾಸಂಸ್ಥೆಗೆ ನೀಡಿರುವ ಈ ಶ್ರೇಷ್ಠ ಕೊಡುಗೆ ಇತರರಿಗೂ ಮಾದರಿಯಾಗಿದೆ ಎಂದು ಕಾಲೇಜಿನ ಪ್ರಾಂಶುಪಾಲೆ ಡಾ.ಮಮತಾ ಕೆ.ವಿ. ಶರೀರ ರಚನಾ ವಿಭಾಗ ಸಂಶೋಧನ ವಿಭಾಗದ ಮುಖ್ಯಸ್ಥ ಡಾ. ಕೃಷ್ಣಮೂರ್ತಿ ಎನ್. ಅವರಿಗೆ ದೇಹವನ್ನು ಹಸ್ತಾಂತರಿಸಿದರು‌.