ರುಂಡ ಬೇರ್ಪಟ್ಟ ಸ್ಥಿತಿಯಲ್ಲಿ ದುರ್ಮರಣ!

ಉಡುಪಿ | ಲೋಕಬಂಧು ನ್ಯೂಸ್
ಆತ್ಮಹತ್ಯೆ ವೇಳೆ ದೇಹದಿಂದ ರುಂಡ ಬೇರ್ಪಟ್ಟ ಹೃದಯ ವಿದ್ರಾವಕ ಘಟನೆ ಅಂಬಾಗಿಲು ಸಮೀಪದ ಕಕ್ಕುಂಜೆ ಎಂಬಲ್ಲಿ ಶನಿವಾರ ತಡರಾತ್ರಿ ಸಂಭವಿಸಿದೆ.
ಕಕ್ಕುಂಜೆ ನಿವಾಸಿ ಪುರುಷೋತ್ತಮ ನಾಯಕ್ (52) ದುರಂತ ರೀತಿಯಲ್ಲಿ ಆತ್ಮಹತ್ಯೆಗೆ ಶರಣಾದ ವ್ಯಕ್ತಿ. ಅವರು ಆತ್ಮಹತ್ಯೆ ಮಾಡಿಕೊಳ್ಳುವ ಸಂದರ್ಭದಲ್ಲಿ ದೇಹದಿಂದ ರುಂಡ ಬೇರ್ಪಟ್ಟಿತ್ತು.


ಅರ್ಚಕ ವಾಸುದೇವ ನಾಯಕ್ ಅವರ ದ್ವಿತೀಯ ಪುತ್ರ, ಮಣಿಪಾಲದ ವ್ಯಾಲಿವ್ಯೂ ಹೋಟೆಲಿನಲ್ಲಿ ಎಲೆಕ್ಟ್ರಿಷಿಯನ್ ಆಗಿ ಕೆಲಸ ಮಾಡುತ್ತಿದ್ದ ಪುರುಷೋತ್ತಮ ನಾಯಕ್ ಮಾನಸಿಕ ಖಿನ್ನತೆಗೆ ಒಳಗಾಗಿ ನೈಲಾನ್ ಹಗ್ಗದಿಂದ ಬಿಗಿದು ಬಾವಿಗೆ ಜಿಗಿದಾಗ ದೇಹಭಾರದಿಂದ ಕತ್ತು ಕಿತ್ತು ದೇಹ ಬಾವಿಗೆ ಬಿದ್ದಿತ್ತು. ಬಾವಿ ನೀರು ಕೆಂಪಾಗಿತ್ತು!


ಮೃತರು ಕಕ್ಕುಂಜೆಯ ಕಟ್ಟೆ ಮಹಾದೇವಿ ದೇವಸ್ಥಾನದ ಆಡಳಿತ ಮಂಡಳಿ ಕಾರ್ಯದರ್ಶಿಯಾಗಿದ್ದರು. ಹಲವು ಸಾಮಾಜಿಕ ಕಾರ್ಯಗಳಲ್ಲಿ ತೊಡಗಿಸಿಕೊಂಡಿದ್ದರು. ಪುರುಷೋತ್ತಮ ನಾಯಕ್ ಕುಟುಂಬ ಬಹಳಷ್ಟು ಖ್ಯಾತಿ ಪಡೆದಿತ್ತು.