ಉಚಿತ ನೇತ್ರ ಪೊರೆ ಚಿಕಿತ್ಸಾ ಶಿಬಿರ

ಲೋಕಬಂಧು ನ್ಯೂಸ್, ಉಡುಪಿ
ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆ, ನೇತ್ರಜ್ಯೋತಿ ಚಾರಿಟೆಬಲ್ ಟ್ರಸ್ಟ್ ಉಡುಪಿ ಆಶ್ರಯದಲ್ಲಿ ಆತ್ರಾಡಿ ಗ್ರಾಮ ಪಂಚಾಯತ್ ಸಭಾಂಗಣದಲ್ಲಿ ಉಚಿತ ನೇತ್ರ ಚಿಕಿತ್ಸೆ ಮತ್ತು ಪೊರೆ ಚಿಕಿತ್ಸೆ ಶಿಬಿರ ನಡೆದಿದ್ದು, ಶಿಬಿರವನ್ನು ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಸಮೂಹ ಕಣ್ಣಿನ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಹಾಗೂ ನೇತ್ರತಜ್ಞ ಡಾ. ಕೃಷ್ಣಪ್ರಸಾದ್ ಕೂಡ್ಲು ಉದ್ಘಾಟಿಸಿ ಶಿಬಿರದ ಸದುಪಯೋಗ ಪಡೆದುಕೊಳ್ಳುವಂತೆ ಸಲಹೆ ನೀಡಿದರು.ಸಾರ್ವಜನಿಕ ಗಣೇಶೋತ್ಸವ ಸಮಿತಿ ಅಧ್ಯಕ್ಷ ಕೃಷ್ಣ ಭಂಡಾರಿ ಅಧ್ಯಕ್ಷತೆ ವಹಿಸಿದ್ದರು.


ಪ್ರಾಥಮಿಕ ಆರೋಗ್ಯ ಕೇಂದ್ರದ ಡಾ.ನರಸಿಂಹ ನಾಯಕ್, ಗ್ರಾ.ಪಂ. ಕಾರ್ಯದರ್ಶಿ ಶಕುಂತಳಾ ಶೆಟ್ಟಿ, ಪ್ರಸಾದ್ ನೇತ್ರಾಲಯದ ನೇತ್ರತಜ್ಞ ಡಾ. ಪ್ರೇಮ್ ಇದ್ದರು.


ಧವಲಾ ಬಿ. ಸ್ವಾಗತಿಸಿ, ನಿರೂಪಿಸಿದರು.


ಶಿಬಿರದಲ್ಲಿ 120 ಮಂದಿ ತಪಾಸಣೆಗೊಳಗಾದರು. 20 ಮಂದಿಯ ಪೊರೆ ಚಿಕಿತ್ಸೆ ಮತ್ತು 65 ಮಂದಿ ಕನ್ನಡಕ ವಿತರಣೆಗೆ ಆಯ್ಕೆಯಾದರು.