ಧರ್ಮಸ್ಥಳದಲ್ಲಿ ಕೊಚ್ಚಿಕಾರ್ ಸಿತಾರ್ ವಾದನ

ಲೋಕಬಂಧು ನ್ಯೂಸ್, ಧರ್ಮಸ್ಥಳ
ಮಹಾಶಿವರಾತ್ರಿ ಪರ್ವದಿನದಂದು ಶ್ರೀಕ್ಷೇತ್ರ ಧರ್ಮಸ್ಥಳದಲ್ಲಿ ಭಕ್ತಿ ಹಾಗೂ ಸಂಗೀತದ ಅಪೂರ್ವ ಸಂಯೋಗ ಕಂಡುಬಂತು.ಮಂಗಳೂರಿನ ಖ್ಯಾತ ಸಿತಾರ್ ವಾದಕ 'ಸಿತಾರ್ ರತ್ನ' ಕೊಚ್ಚಿಕಾರ್ ದೇವದಾಸ್ ಪೈ ಅವರು ಶ್ರೀ ಮಂಜುನಾಥ ಸನ್ನಿಧಿಯಲ್ಲಿ ಭಕ್ತಿಭಾವಪೂರ್ಣ ಸಿತಾರ್ ವಾದನ ನುಡಿಸಿ ಭಕ್ತರ ಮನ ಸೂರೆಗೊಂಡರು.


ಧರ್ಮಾಧಿಕಾರಿ ಡಾ. ಡಿ. ವೀರೇಂದ್ರ ಹೆಗ್ಗಡೆ ಸಮ್ಮುಖದಲ್ಲಿ ಕಾರ್ಯಕ್ರಮ ನೆರವೇರಿತು.


ಈ ಸಂದರ್ಭದಲ್ಲಿ ಹೆಗ್ಗಡೆ ದಂಪತಿ ಕೊಚ್ಚಿಕಾರ್ ದೇವದಾಸ್ ಪೈ ಅವರ ಸಂಗೀತ ಸೇವೆಯನ್ನು ಶ್ಲಾಘಿಸಿ, ಸಂಗೀತ ಕಲಾ ಕ್ಷೇತ್ರಕ್ಕೆ ಅವರ ಕೊಡುಗೆಯನ್ನು ಮುಕ್ತಕಂಠದಿಂದ ಶ್ಲಾಘಿಸಿದರು. ಬಳಿಕ ಶ್ರೀ ಮಂಜುನಾಥ ದೇವರ ಮೊಹರಿರುವ ಸುವರ್ಣ ಪದಕ ಪ್ರದಾನ ಮಾಡಿ ಶಾಲು ಹೊದಿಸಿ ಗೌರವಿಸಿದರು.

ಕಾರ್ಯಕ್ರಮದಲ್ಲಿ ಅನೇಕ ಭಕ್ತರು ಹಾಗೂ ಸಂಗೀತಾಸಕ್ತರು ಉಪಸ್ಥಿತರಿದ್ದು, ಮಹಾಶಿವರಾತ್ರಿಯ ಆಚರಣೆಗೆ ವಿಶೇಷ ಮೆರುಗು ನೀಡಿತು