ಲೋಕಬಂಧು ನ್ಯೂಸ್, ಉಡುಪಿ
ಉಡುಪಿ ಜಿಲ್ಲಾ ಯುವ ಬ್ರಾಹ್ಮಣ ಪರಿಷತ್ತಿನ 28ನೇ ವರ್ಷದ ಸಾಮೂಹಿಕ ಶ್ರೀ ಸತ್ಯನಾರಾಯಣ ಪೂಜೆ ಕಲ್ಸಂಕ- ಗುಂಡಿಬೈಲು ಮುಖ್ಯರಸ್ತೆಯಲ್ಲಿರುವ ಬ್ರಾಹ್ಮೀ ಸಭಾಭವದಲ್ಲಿ ಮೂಡುಬೆಟ್ಟು ರಮೇಶ್ ಭಟ್ ನೇತೃತ್ವದಲ್ಲಿ ನಡೆಯಿತು.ಅದಮಾರು ಮಠದ ಶ್ರೀಈಶಪ್ರಿಯತೀರ್ಥ ಶ್ರೀಪಾದರಿಂದ ಆಶೀರ್ವಚನ ಹಾಗೂ ವಿಪ್ರ ಸದಸ್ಯರಿಂದ ವಿಷ್ಣು ಸಹಸ್ರನಾಮ ಪಾರಾಯಣ ನಡೆಯಿತು.
ಪರಿಷತ್ತಿನ ಅಧ್ಯಕ್ಷ ರಘುಪತಿ ರಾವ್ ಕಿದಿಯೂರು, ಪ್ರಧಾನ ಕಾರ್ಯದರ್ಶಿ ಅಮಿತಾ ಕ್ರಮಧಾರಿ, ಕೋಶಾಧಿಕಾರಿ ಕೆ. ರವೀಂದ್ರ ಆಚಾರ್ಯ, ಮಾಜಿ ಅಧ್ಯಕ್ಷರಾದ ವಿಜಯ ರಾಘವ ರಾವ್, ಭಾಸ್ಕರ ರಾವ್ ಕಿದಿಯೂರು, ಮುರಲೀಧರ ತಂತ್ರಿ, ನಾಗರಾಜ ತಂತ್ರಿ, ಎಂ.ಎಸ್. ವಿಷ್ಣು, ಕೆ.ಎಂ.ಉಡುಪ, ರಂಜನ್ ಕಲ್ಕೂರ, ಶಶಿಧರ್ ಭಟ್, ಚೈತನ್ಯ ಎಮ್.ಜಿ., ವಿಷ್ಣು ಪಾಡಿಗಾರ್, ಚಂದ್ರಕಾಂತ್, ಪದ್ಮಲತಾ, ರಾಜೇಂದ್ರ ಪ್ರಸಾದ್, ಕುಮಾರಸ್ವಾಮಿ ಉಡುಪ, ರಾಜೇಶ್ ಪಣಿಯಾಡಿ ಹರಿಪ್ರಸಾದ್ ಉಪಸ್ಥಿತರಿದ್ದರು.