ಉಡುಪಿ | ಲೋಕಬಂಧು ನ್ಯೂಸ್
ನೌಕಾಪಡೆಯ ಹಡಗುಗಳ ರಹಸ್ಯ ಮಾಹಿತಿ ರವಾನೆ ಪ್ರಕರಣಕ್ಕೆ ಸಂಬಂಧಿಸಿದಂತೆ ಮಲ್ಪೆ ಪೊಲೀಸರು 5ನೇ ಆರೋಪಿ ಪಶ್ಚಿಮ ಬಂಗಾಲದ ಆಲಿಫ್ ಇಸ್ಲಾಮ್ ( 21) ಎಂಬಾತನನ್ನು ಫೆ.16ರಂದು ದಸ್ತಗಿರಿ ಮಾಡಿದ್ದಾರೆ.
ಆತ ಬಾಂಗ್ಲಾದೇಶದ ಅಕ್ರಮ ವಲಸೆಗಾರ ಎಂದು ಶಂಕಿಸಲಾಗಿದ್ದು, ಕೇರಳದ ಮರಾಯು ಗ್ರಾಮದ ಕೋಕಿಲ್ಕಟ್ಟ ಎಂಬಲ್ಲಿ ಬಾಡಿಗೆ ಮನೆಯೊಂದರಲ್ಲಿ ವಾಸವಾಗಿದ್ದ.
ಆರೋಪಿಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿದ್ದು, ಫೆ. 21ರ ವರೆಗೆ ನ್ಯಾಯಾಂಗ ಬಂಧನ ವಿಧಿಸಲಾಗಿದೆ.
