ಲೋಕಬಂಧು ನ್ಯೂಸ್, ಮೂಡುಬಿದಿರೆ
ಆಳ್ವಾಸ್ ಕಾಲೇಜಿನ ಸಮಾಜಕಾರ್ಯ ವಿಭಾಗದ ಸಹಾಯಕ ಪ್ರಾಧ್ಯಾಪಕಿ ಪವಿತ್ರ ಎ.ವಿ. ಅವರಿಗೆ ದಾವಣಗೆರೆ ವಿಶ್ವವಿದ್ಯಾಲಯ ಪಿಎಚ್‌ಡಿ ಪದವಿ ಪ್ರದಾನ ಮಾಡಿದೆ.ಪವಿತ್ರ ಎ.ವಿ. ‘ಸೈಕೋಸೋಷಿಯಲ್ ಡೈಮೆನ್ಶನ್ಸ್ ಆಫ್ ಸುಸೈಡಲ್ ಬಿಹೇವಿಯರ್ ಅಮಂಗ್ ರೂರಲ್ ಅಡೊಲೆಸೆಂಟ್ಸ್ ವಿಥ್ ಸ್ಪೆಷಲ್ ರೆಫರೆನ್ಸ್ ಟು ಗವರ್ನ್ಮೆಂಟ್ ಪ್ರಿ-ಯುನಿವರ್ಸಿಟಿ ಕಾಲೇಜಸ್ ಇನ್ ಕರ್ನಾಟಕ’ ವಿಷಯದ ಕುರಿತು ದಾವಣಗೆರೆ ವಿಶ್ವವಿದ್ಯಾಲಯದ ಪ್ರಾಧ್ಯಾಪಕ ಡಾ.ಲೋಕೇಶ್ ಎಂ.ಯು. ಮಾರ್ಗದರ್ಶನದಲ್ಲಿ ಮಹಾಪ್ರಬಂಧ ಮಂಡಿಸಿದ್ದರು.
ದಾವಣಗೆರೆ ವಿ.ವಿ. ಘಟಿಕೋತ್ಸವದಲ್ಲಿ ರಾಜ್ಯಪಾಲ ಥಾವರ್ ಚಂದ್ ಗೆಹ್ಲೋಟ್ ಪದವಿ ಪ್ರಧಾನ ಮಾಡಿದರು.
ಪವಿತ್ರ ಅವರು ಎಮ್‌ಆರ್‌ಪಿಎಲ್ ಸಂಸ್ಥೆಯ ಮಾರ್ಕೆಟಿಂಗ್ ವಿಭಾಗದ ಚೀಫ್ ಮ್ಯಾನೇಜರ್ ಸ್ವಾಮಿಪ್ರಸಾದ್ ಪತ್ನಿ.