ಸಹಕಾರ ಭಾರತಿ ಸಂಸ್ಥಾಪನಾ ದಿನಾಚರಣೆ

ಲೋಕಬಂಧು ನ್ಯೂಸ್, ಉಡುಪಿ
ಸಹಕಾರ ಭಾರತಿ ಉಡುಪಿ ತಾಲೂಕು ವತಿಯಿಂದ ಸಂಸ್ಥಾಪನಾ ದಿನಾಚರಣೆಯನ್ನು ಕಿನ್ನಿಮೂಲ್ಕಿಯ ಉಡುಪಿ ಇಂಡಸ್ಟ್ರಿಯಲ್ ಕೋ-ಆಪರೇಟಿವ್ ಸೊಸೈಟಿ ಸಭಾಭವನದಲ್ಲಿ ನಡೆಸಲಾಯಿತು.ಸೊಸೈಟಿಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ರಾಜೇಶ್ ಹೆಗ್ಡೆ ಕಾರ್ಯಕ್ರಮ ಉದ್ಘಾಟಿಸಿದರು.


ಸಹಕಾರ ಭಾರತಿ ಉಡುಪಿ ಜಿಲ್ಲಾಧ್ಯಕ್ಷ ದಿನೇಶ್ ಹೆಗ್ಡೆ ಆತ್ರಾಡಿ ಮಾತನಾಡಿ ನಗರ ಮತ್ತು ಗ್ರಾಮೀಣ ಪ್ರದೇಶದ ಪ್ರತೀ ಮನೆಗೊಬ್ಬರು ಸಹಕಾರಿಗಳಾಗಿ ಆರ್ಥಿಕ ಚಟುವಟಿಕೆಗಳ ಮೂಲಕ ಸಹಕಾರ ನೀಡಿದಲ್ಲಿ ದೇಶದ ಪ್ರಗತಿ ಸಾಧ್ಯ ಎಂದರು.


ಉಪಾಧ್ಯಕ್ಷ ಹರೀಶ್ ಕಲ್ಯ ಸಂಸ್ಥಾಪನಾ ದಿನಾಚರಣೆ ಬಗ್ಗೆ ಉಪನ್ಯಾಸ ನೀಡಿದರು.


ಅಧ್ಯಕ್ಷತೆ ವಹಿಸಿದ್ದ ಸಹಕಾರ ಭಾರತಿ ಉಡುಪಿ ತಾಲೂಕು ಅಧ್ಯಕ್ಷ ಪಾಂಡುರಂಗ ಕಾಮತ್ ಎಳ್ಳಾರೆ, ಪಂಚಾಯತ್ ಮತ್ತು ಗ್ರಾಮೀಣ ಪ್ರದೇಶಗಳಲ್ಲಿ ಮಹಿಳೆಯರು ಹಾಗೂ ಯುವಕರನ್ನು ಸಂಘಟಿಸಿ ಸಹಕಾರ ಭಾರತಿಯನ್ನು ವಿಸ್ತರಿಸಿ ಸಹಕಾರಿಗಳ ಅಭಿವೃದ್ಧಿ ಜೊತೆಗೆ ರಾಷ್ಟ್ರೀಯತೆಯ ಮನೋಭಾವನೆ ಬೆಳೆಸಬೇಕು ಎಂದರು.


ತಾಲೂಕು ಮಹಿಳಾ ಪ್ರಮುಖ್ ರೂಪಾ ನಾಯಕ್ ಮತ್ತು ವಿವಿಧ ಸಂಘಸಂಸ್ಥೆಗಳ ಸಹಕಾರಿಗಳು ಉಪಸ್ಥಿತರಿದ್ದರು.


ನಾಗೇಶ್  ಪ್ರಾರ್ಥಿಸಿದರು. ಪ್ರೀತಿ ಕಾಮತ್ ಮತ್ತು ಜ್ಯೋತಿ ಕಾಮತ್ ಸಹಕಾರ ಗೀತೆ ಹಾಡಿದರು. ಮಂಜುನಾಥ ಮಣಿಪಾಲ ಸ್ವಾಗತಿಸಿ, ನಿರೂಪಿಸಿದರು. ರತ್ನಾಕರ ಶೆಟ್ಟಿ ಆತ್ರಾಡಿ ವಂದಿಸಿದರು.