ನಿವೃತ್ತ ಸೇನಾನಿ ಗೌತಮ್ ಕುಂದಾಪುರಗೆ ಸನ್ಮಾನ

ಲೋಕಬಂಧು ನ್ಯೂಸ್, ಕುಂದಾಪುರ
ಫೋರ್ ಆ್ಯಂಡ್ ಸಿಕ್ಸ್ ಕ್ರಿಕೆಟರ್ಸ್ ಮಸ್ಕತ್ ವತಿಯಿಂದ ಭಾರತೀಯ ನೌಕಾದಳದ ನಿವೃತ್ತ ಲೆಫ್ಟಿನೆಂಟ್ ಕಮಾಂಡರ್ ಗೌತಮ್ ಕುಂದಾಪುರ ಅವರನ್ನು ಮಸ್ಕತ್'ನ ವಾದಿಕಬೀರ್ ಹೋಟೆಲ್ ಗೋಲ್ಡನ್ ಓಯಾಸಿಸ್‌ನಲ್ಲಿ ಗೌರವಿಸಲಾಯಿತು.ಭಾರತೀಯ ನೌಕಾದಳದಲ್ಲಿ 12 ವರ್ಷ ಕಾಲ ಸೇವೆ ಸಲ್ಲಿಸಿದ ಗೌತಮ್ ಕುಂದಾಪುರ ನೌಕೆ ನಿರ್ಮಾಣ, ಯೋಜನಾ ನಿರ್ವಹಣೆ ಹಾಗೂ ನಾಯಕತ್ವ ಕ್ಷೇತ್ರದಲ್ಲಿ  ಅವರ ವಿಶಿಷ್ಟ ಸಾಧನೆಗಾಗಿ ಅಭಿನಂದಿಸಲಾಯಿತು.


ಸಂಘದ ಸದಸ್ಯರಾದ ದಯಾನಂದ ರಾವ್, ಸುರೇಂದ್ರ ಶೆಟ್ಟಿ, ಜಯರಾಜ ಶೆಟ್ಟಿ, ಉತ್ತಮ ರೈ ಹಾಗೂ ರವಿ ವೇದಿಕೆಯಲ್ಲಿದ್ದರು.


ಗುರುನಂದನ ದೇಶ ಭಕ್ತಿಗೀತೆ ಹಾಡಿದರು. ಹರೀಶ್ ಹೊಸಂಗಡಿ ಪರಿಚಯಿಸಿದರು. ಜೆ.ಪಿ. ಗಿಳಿಯಾರ್ ಕಾರ್ಯಕ್ರಮ ನಿರೂಪಿಸಿದರು.