ಉಡುಪಿ ಪತ್ರಿಕಾ ಭವನ ಸಮಿತಿ: ಅಂಕಿತ್ ಶೆಟ್ಟಿ ಸಂಚಾಲಕ, ಗಣೇಶ್ ಕಲ್ಯಾಣಪುರ ಸಹ ಸಂಚಾಲಕ

ಉಡುಪಿ |ಲೋಕಬಂಧು ನ್ಯೂಸ್
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧೀನ ಘಟಕ ಉಡುಪಿ ಪತ್ರಿಕಾ ಭವನ ಸಮಿತಿಯ 2025–28ನೇ ಸಾಲಿನ ನೂತನ ಸಂಚಾಲಕರಾಗಿ 'ಚಾನೆಲ್ 9'ನ ಅಂಕಿತ್ ಶೆಟ್ಟಿ ಹಾಗೂ ಸಹ ಸಂಚಾಲಕರಾಗಿ 'ಉದಯವಾಣಿ'ಯ ಗಣೇಶ್ ಕಲ್ಯಾಣಪುರ ಆಯ್ಕೆಯಾಗಿದ್ದಾರೆ.
ಚುನಾವಣಾಧಿಕಾರಿಯಾಗಿದ್ದ ವಾರ್ತಾಧಿಕಾರಿ ಮಂಜುನಾಥ್  ಅಧ್ಯಕ್ಷತೆಯಲ್ಲಿ ಸೋಮವಾರ ಉಡುಪಿ ಪತ್ರಿಕಾ ಭವನದಲ್ಲಿ ಚುನಾವಣೆ ನಡೆಯಿತು.


ಕಾರ್ಯಕಾರಿ ಸಮಿತಿ ಸದಸ್ಯರಾಗಿ 'ನಮ್ಮ ಟಿವಿ'ಯ ರಾಜೇಶ್ ಶೆಟ್ಟಿ, 'ಉದಯವಾಣಿ'ಯ ರಾಜು ಖಾರ್ವಿ, ಪುನೀತ್ ಸಾಲ್ಯಾನ್ ಮತ್ತು ಎಸ್.ಜಿ. ನಾಯ್ಕ್, 'ರಿಪಬ್ಲಿಕ್ ಚಾನೆಲ್‌'ನ ಹರೀಶ್ ಪಿ., 'ವಿಜಯವಾಣಿ'ಯ ಗೋಪಾಲಕೃಷ್ಣ ಪಾದೂರು, 'ಸ್ಪಂದನ' ಟಿವಿಯ ನಾಗರಾಜ ರಾವ್, 'ಮ್ಯಾಂಗಲೂರಿಯನ್ ಡಾಟ್ ಕಾಮ್‌'ನ ಮೈಕಲ್ ರೋಡ್ರಿಗಸ್, 'ಅಭಿಮತ ಟಿವಿ'ಯ ನಿತೀಶ್ ಮಂಚಿ ಹಾಗೂ 'ಪ್ರಜಾ ಟಿವಿ'ಯ ಜಯಂತ್ ಎ. ಅವಿರೋಧವಾಗಿ ಆಯ್ಕೆಯಾದರು.