ಲೋಕ ಅದಾಲತ್: ಒಂದೇ ದಿನದಲ್ಲಿ 38,369 ಪ್ರಕರಣ ಇತ್ಯರ್ಥ

ಲೋಕಬಂಧು ನ್ಯೂಸ್ | ಉಡುಪಿ, ಮಾ.16
ಬೆಂಗಳೂರಿನ ಕರ್ನಾಟಕ ರಾಜ್ಯ ಕಾನೂನು ಸೇವೆಗಳ ಪ್ರಾಧಿಕಾರ ಬೆಂಗಳೂರು ನಿರ್ದೇಶನದ ಮೇರೆಗೆ ಮಾ.14ರಂದು ಉಡುಪಿ ಜಿಲ್ಲೆಯ ಉಡುಪಿ, ಕುಂದಾಪುರ, ಕಾರ್ಕಳ ಹಾಗೂ ಬೈಂದೂರಿನ ವಿವಿಧ ನ್ಯಾಯಾಲಯಗಳಲ್ಲಿ ನಡೆದ ರಾಷ್ಟ್ರೀಯ ಲೋಕ ಅದಾಲತ್'ನಲ್ಲಿ ಒಂದೇ ದಿನ ಒಟ್ಟು 38,369 ಪ್ರಕರಣ ಇತ್ಯರ್ಥಪಡಿಸಲಾಯಿತು ಎಂದು ಜಿಲ್ಲಾ ಮತ್ತು ಸತ್ರ ನ್ಯಾಯಾಧೀಶ ಕಿರಣ್ ಎಸ್. ಗಂಗಣ್ಣವರ್ ತಿಳಿಸಿದ್ದಾರೆ.
ಒಟ್ಟು ಪ್ರಕರಣಗಳ ಪೈಕಿ ರಾಜೀಯಾಗಬಲ್ಲ ಅಪರಾಧಿಕ ಪ್ರಕರಣ 33, ಚೆಕ್ ಅಮಾನ್ಯ ಪ್ರಕರಣ 391, ಬ್ಯಾಂಕ್/ಹಣ ವಸೂಲಾತಿ ಪ್ರಕರಣ 5, ಎಂ.ವಿ.ಸಿ ಪ್ರಕರಣ 99, ಸಿವಿಲ್ ಪ್ರಕರಣ 273, ಎಂ.ಎಂ.ಆರ್.ಡಿ ಪ್ರಕರಣ 2, ವಿದ್ಯುತ್ ಕಾಯ್ದೆ ಪ್ರಕರಣ 1, ಇತರ ಕ್ರಿಮಿನಲ್ ಪ್ರಕರಣ 2,094, ಕಾರ್ಮಿಕ ವ್ಯಾಜ್ಯ 11 ಹಾಗೂ ವ್ಯಾಜ್ಯ ಪೂರ್ವ ಪ್ರಕರಣಗಳು 35,460 ಸೇರಿವೆ.


ರಾಜೀ ಮುಖಾಂತರ ಇತ್ಯರ್ಥಪಡಿಸಿ 2 ಕೋ.92 ಲಕ್ಷ 55 ಸಾವಿರ 344 ರೂ. ಪರಿಹಾರದ ಮೊತ್ತ ಘೋಷಿಸಲಾಯಿತು ಎಂದವರು ತಿಳಿಸಿದ್ದಾರೆ.