ಲೋಕಬಂಧು ನ್ಯೂಸ್ ಕಾಪು, ಮಾ.12
ಕನ್ನಡ ಮತ್ತು ತೆಲುಗು ಚಿತ್ರರಂಗದ ಖ್ಯಾತ ನಟಿ ಸಾನ್ವಿ ಶ್ರೀವಾಸ್ತವ ಅವರು ಗುರುವಾರ ಇಲ್ಲಿನ ಶ್ರೀ ಹೊಸಮಾರಿಗುಡಿ ದಿವ್ಯಕ್ಷೇತ್ರಕ್ಕೆ ಭೇಟಿ ನೀಡಿ ಉಚ್ಚಂಗಿ ಸಹಿತ ಮಾರಿಯಮ್ಮ ದೇವಿ ದರುಶನ ಪಡೆದರು.ಕ್ಷೇತ್ರದ ವ್ಯವಸ್ಥಾಪನ ಸಮಿತಿ ಮತ್ತು ಅಭಿವೃದ್ಧಿ ಸಮಿತಿ ವತಿಯಿಂದ ಅವರನ್ನು ಗೌರವಿಸಲಾಯಿತು. ಪ್ರಧಾನ ಅರ್ಚಕ ಶ್ರೀನಿವಾಸ ತಂತ್ರಿ ಕಲ್ಯ ಅಮ್ಮನ ಅನುಗ್ರಹ ಪ್ರಸಾದ ನೀಡಿದರು.
ಈ ಸಂದರ್ಭದಲ್ಲಿ ಅಮ್ಮನ ಸ್ವರ್ಣ ಗದ್ದುಗೆ ಮತ್ತು ದೇವಳದ ಕೆತ್ತನೆಗಳನ್ನು ಕಂಡು ಸಾನ್ವಿ ಮೆಚ್ಚುಗೆ ವ್ಯಕ್ತಪಡಿಸಿದರು. ಚಲನಚಿತ್ರ ಚಿತ್ರೀಕರಣ ಸಂದರ್ಭ ಇಲ್ಲಿಗೆ ಬರುವ ಅವಕಾಶ ಸಿಕ್ಕಿತ್ತು. ಇನ್ನೊಮ್ಮೆ ಬಿಡುವು ಮಾಡಿಕೊಂಡು ಬರುತ್ತೇನೆ ಎಂದರು.
ಪ್ರಬಂಧಕ ಗೋವರ್ಧನ ಸೇರಿಗಾರ್ ಮೊದಲಾದವರಿದ್ದರು.