ಲೋಕಬಂಧು ನ್ಯೂಸ್ | ಮಂಗಳೂರು, ಮಾ.16
ಎಲ್‌ಪಿಜಿ ಸಾಗಣೆ ಹಡಗು ಶಿವಾಲಿಕ್ ಸೋಮವಾರ ಮುಂಡ್ರಾ ಪೋರ್ಟ್ ಎಲ್‌ಪಿಜಿ ಟರ್ಮಿನಲ್‌ಗೆ ಆಗಮಿಸಿದ್ದು, ಸ್ಟ್ರೈಟ್ ಆಫ್ ಹಾರ್ಮಜ್ ಮೂಲಕ 46 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿ ಹೊತ್ತು ತಂದಿದೆ.
ಒಟ್ಟು ಎಲ್‌ಪಿಜಿ ಪ್ರಮಾಣದಲ್ಲಿ 20 ಸಾವಿರ ಮೆಟ್ರಿಕ್ ಟನ್'ನ್ನು ಮುಂದ್ರಾ ಬಂದರಿನಲ್ಲಿ ಇಳಿಸಲಾಗುತ್ತಿದ್ದು, ಉಳಿದ 26 ಸಾವಿರ ಮೆಟ್ರಿಕ್ ಟನ್ ಎಲ್‌ಪಿಜಿಯನ್ನು ನವ ಮಂಗಳೂರು ಬಂದರು ಸಮೀಪದ ಸಿಂಗಲ್ ಪಾಯಿಂಟ್ ಮೂರಿಂಗ್ (ಎಸ್.ಪಿ.ಎಂ) ಸೌಲಭ್ಯದಲ್ಲಿ ಇಳಿಸಲಾಗುತ್ತದೆ.
ಹಡಗಿನಲ್ಲಿ ಸಾಗಿಸಿರುವ ದ್ರವ ಎಲ್‌ಪಿಜಿಯನ್ನು ಇಂಡಿಯನ್ ಆಯಿಲ್ ಕಾರ್ಪೊರೇಶನ್ ತರಿಸಿದೆ.
