ಲೋಕಬಂಧು ನ್ಯೂಸ್ | ಉಡುಪಿ, ಜೂ.30
ತುಳು ಬದುಕಿನ ವೈಶಿಷ್ಟ್ಯಗಳನ್ನು ಪರಿಚಯಿಸುವ ಉದ್ದೇಶದಿಂದ ತುಳುಕೂಟ ಉಡುಪಿ ನೇತೃತ್ವದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದೊಂದಿಗೆ ಮದೆರೆಂಗಿದ ರಂಗ್ ಕಾರ್ಯಕ್ರಮ ಜುಲೈ 4ರಂದು ಅಪರಾಹ್ನ 2ರಿಂದ ನಗರದ ಬಡಗಬೆಟ್ಟು ಸೊಸೈಟಿಯ ಜಗನ್ನಾಥ ಸಭಾಭವನದಲ್ಲಿ ನಡೆಯಲಿದೆ.
ಕಾರ್ಯಕ್ರಮದ ಅಂಗವಾಗಿ ಶಾಲೆ ಹಾಗೂ ಕಾಲೇಜು ವಿದ್ಯಾರ್ಥಿಗಳಿಗೆ ವಿವಿಧ ಸಾಂಪ್ರದಾಯಿಕ ಸ್ಪರ್ಧೆ ಆಯೋಜಿಸಲಾಗಿದೆ.1ರಿಂದ 5ನೇ ತರಗತಿ ವಿದ್ಯಾರ್ಥಿಗಳಿಗೆ ಎಲೆಯಿಂದ ಪೀಂಪಿರಿ ಊದುವ ಸ್ಪರ್ಧೆ, ಹಲಸಿನ ಬೀಜದ ಸಿಪ್ಪೆ ತೆಗೆಯುವ ಸ್ಪರ್ಧೆ ಮತ್ತು ತೆಂಗಿನ ಗರಿಯಿಂದ ಆಟಿಕೆ ತಯಾರಿಸುವ ಸ್ಪರ್ಧೆ. 6ರಿಂದ 10ನೇ ತರಗತಿ ವಿದ್ಯಾರ್ಥಿಗಳಿಗೆ ಅಂಗೈಗೆ ಮದೆರೆಂಗಿ ಇಡುವ ಸ್ಪರ್ಧೆ, ತುಳುನಾಡಿನ ವಿವಿಧ ಹಣ್ಣುಗಳ ಪರಿಚಯ ಸ್ಪರ್ಧೆ, ತೆಂಗಿನ ಗರಿಯಿಂದ ಆಟಿಕೆ ತಯಾರಿ ಸ್ಪರ್ಧೆ ಆಯೋಜಿಸಲಾಗಿದೆ.
ಕಾಲೇಜು ವಿದ್ಯಾರ್ಥಿಗಳಿಗೆ ಅಂಗೈಗೆ ಮದೆರೆಂಗಿ ಇಡುವ ಸ್ಪರ್ಧೆ, ಕೇಶಾಲಂಕಾರ ಸ್ಪರ್ಧೆ ಮುಂಡಾಸು ಕಟ್ಟುವ ಸ್ಪರ್ಧೆ, ಹೂ ಕಟ್ಟುವ ಸ್ಪರ್ಧೆ ಅಲ್ಲದೆ, ಎಲ್ಲಾ ವಿಭಾಗದ ವಿದ್ಯಾರ್ಥಿಗಳಿಗೆ ತುಳು ರಸಪ್ರಶ್ನೆ ಹಾಗೂ ತುಳು ಲಿಪಿಯಲ್ಲಿ ಬರೆಯುವ ಸ್ಪರ್ಧೆ ಕೂಡಾ ನಡೆಯಲಿದೆ.
ಸ್ಪರ್ಧೆ ನಿಯಮ
ಮದೆರೆಂಗಿ ಸ್ಪರ್ಧೆ ಸಾಂಪ್ರದಾಯಿಕ ರೀತಿಯಲ್ಲಿ ನಡೆಯಲಿದ್ದು, ಕೋನ್ ಬಳಸಲು ಅವಕಾಶ ಇಲ್ಲ. ಸ್ಪರ್ಧಿಗಳು ಮದೆರೆಂಗಿ ತಯಾರಿಸಿ, ಕಡ್ಡಿಯ ಸಹಾಯದಿಂದ ಅಂಗೈಯಲ್ಲಿ ವಿನ್ಯಾಸ ಬಿಡಿಸಬೇಕು.
ಹೂ ಕಟ್ಟುವ ಸ್ಪರ್ಧಾಳುಗಳು ಸ್ವತಃ ಹೂವು ತರಬೇಕು. ಎಲ್ಲಾ ಸ್ಪರ್ಧಿಗಳು ಅಪರಾಹ್ನ 2 ಗಂಟೆಯೊಳಗೆ ಸ್ಥಳದಲ್ಲಿರಿರಬೇಕು.
ಹೆಚ್ಚಿನ ಮಾಹಿತಿಗಾಗಿ 9036483463 ಅಥವಾ 8217687475 ಸಂಖ್ಯೆ ಸಂಪರ್ಕಿಸುವಂತೆ ತುಳುಕೂಟ ಅಧ್ಯಕ್ಷ ಬಿ. ಜಯಕರ ಶೆಟ್ಟಿ ಇಂದ್ರಾಳಿ ತಿಳಿಸಿದ್ದಾರೆ.

