ಕೋರ್ಟ್‌ಗೆ ಬಾಂಬ್ ಬೆದರಿಕೆ: ರಕ್ಷಣೆಗೆ ಮನವಿ

ಲೋಕಬಂಧು | ನ್ಯೂಸ್ ಉಡುಪಿ, ಜೂ.29
ಉಡುಪಿ ನ್ಯಾಯಾಲಯಕ್ಕೆ ಪದೇ ಪದೇ ಹುಸಿ ಬಾಂಬ್ ಬೆದರಿಕೆ ಹಿನ್ನೆಲೆಯಲ್ಲಿ ಸೂಕ್ತ ರಕ್ಷಣೆ ನೀಡುವಂತೆ ಪೊಲೀಸ್ ವರಿಷ್ಠಾಧಿಕಾರಿಗೆ ಮನವಿ ಸಲ್ಲಿಸಲಾಯಿತು.
ಸೋಮವಾರ ಉಡುಪಿ ವಕೀಲರ ಸಂಘದ ಪ್ರತಿನಿಧಿಗಳು, ನ್ಯಾಯಾಧೀಶರು, ವಕೀಲರು, ನ್ಯಾಯಾಲಯ ಸಿಬ್ಬಂದಿ ಮತ್ತು ಕಕ್ಷಿಗಾರರ ಹಿತದೃಷ್ಟಿಯಿಂದ ಜಿಲ್ಲಾ ಪೊಲೀಸ್ ಅಧೀಕ್ಷಕರಿಗೆ ಮನವಿ ಮಾಡಲಾಯಿತು.


ಪ್ರಕರಣವನ್ನು ಗಂಭೀರವಾಗಿ ಪರಿಗಣಿಸಿ, ತನಿಖೆ ನಡೆಸಿ ನ್ಯಾಯಾಲಯಗಳಿಗೆ ಬಂದೋಬಸ್ತ್ ಒದಗಿಸುವಂತೆ ಮನವಿ ಮಾಡಲಾಯಿತು.


ಬೇಡಿಕೆಗೆ ಸಕಾರಾತ್ಮಕವಾಗಿ ಸ್ಪಂದಿಸಿದ ಅವರು, ಶೀಘ್ರ ತನಿಖೆ ನಡೆಸಿ ಕ್ರಮ ಕೈಗೊಳ್ಳುವುದಾಗಿ ಭರವಸೆ ನೀಡಿದರು.


ವಕೀಲರ ಸಂಘದ ಪ್ರಧಾನ ಕಾರ್ಯದರ್ಶಿ ಚಂದ್ರಶೇಖರ್ ಶೆಟ್ಟಿ ವಕೀಲರಾದ ವೈ.ಟಿ.ರಾಘವೇಂದ್ರ, ಅಖಿಲಾ ಬಿ. ಹೆಗ್ಡೆ, ಗುರುರಾಜ್ ಜಿ.ಎಸ್., ಅನಿಲ್ ಪೂಜಾರಿ, ಕವಿತಾ, ನಾಗರಾಜ್ ಕೆ., ಬಾನುಮತಿ ನಾಯರಿ ಮೊದಲಾದವರಿದ್ದರು.


ಉಡುಪಿ ಕೋರ್ಟ್‌ಗೆ ಕಳೆದ ಸುಮಾರು ಒಂದು ವಾರದ ಅವಧಿಯಲ್ಲಿ ಮೂರು ಬಾರಿ ಬಾಂಬ್ ಬೆದರಿಕೆ ಕರೆ ಬಂದಿದ್ದು, ಸೋಮವಾರವೂ ಈ-ಮೈಲ್ ಸಂದೇಶ ಬಂದಿತ್ತು.