ದೇವಾಲಯ ಸಂಸ್ಕೃತಿ ಉಳಿಸುವ ಕೇಂದ್ರ

ಲೋಕಬಂಧು ನ್ಯೂಸ್ | ಹಿರಿಯಡಕ, ಜೂ.29
ದೇವಾಲಯಗಳು ಕೇವಲ ಪೂಜಾ ಕೇಂದ್ರಗಳು ಮಾತ್ರವಲ್ಲ ಅವು ನಮ್ಮ ಸಂಸ್ಕೃತಿ, ಪರಂಪರೆ ಹಾಗೂ ಸಾಮಾಜಿಕ ಐಕ್ಯತೆಯ ಪ್ರತೀಕ ಎಂದು ಕಾಪು ಶಾಸಕ ಗುರ್ಮೆ ಸುರೇಶ್ ಶೆಟ್ಟಿ ಹೇಳಿದರು.
ಹಿರೇಬೆಟ್ಟು ಶ್ರೀ ಮಹಾಲಿಂಗೇಶ್ವರ ದೇವಳ ಜೀರ್ಣೋದ್ಧಾರ ಸಮಿತಿ ವತಿಯಿಂದ ನಡೆದ ದೇವಾಲಯದ ಜೀರ್ಣೋದ್ಧಾರ ಸಂಬಂಧಿತ ಧಾರ್ಮಿಕ ಕಾರ್ಯಕ್ರಮದಲ್ಲಿ ಮಾತನಾಡಿದರು.


ಶತಮಾನಗಳ ಇತಿಹಾಸ ಹೊಂದಿರುವ ದೇವಾಲಯಗಳ ಜೀರ್ಣೋದ್ಧಾರ ಕೇವಲ ಕಟ್ಟಡದ ನವೀಕರಣವಲ್ಲ. ಪೂರ್ವಜರು ಕಟ್ಟಿಕೊಟ್ಟ ಸಂಸ್ಕೃತಿ ಮತ್ತು ಧಾರ್ಮಿಕ ಪರಂಪರೆಯನ್ನು ಮುಂದಿನ ಪೀಳಿಗೆಗೆ ಉಳಿಸಿ ಕೊಡುವ ಮಹತ್ವದ ಕಾರ್ಯವಾಗಿದೆ. ಇಂಥ ಪುಣ್ಯ ಕಾರ್ಯಗಳಲ್ಲಿ ಸಮಾಜದ ಪ್ರತಿಯೊಬ್ಬರೂ ಕೈಜೋಡಿಸಬೇಕು ಎಂದರು.


ಜೀರ್ಣೋದ್ಧಾರ ಕಾರ್ಯದಲ್ಲಿ ತೊಡಗಿಕೊಂಡಿರುವ ಸಮಿತಿಯ ಪದಾಧಿಕಾರಿಗಳು, ದಾನಿಗಳು, ಗ್ರಾಮಸ್ಥರು ಹಾಗೂ ಭಕ್ತರ ಸೇವೆಯನ್ನು ಶ್ಲಾಘಿಸಿದ ಅವರು, ದೇವಾಲಯದ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುವ ಭರವಸೆ ನೀಡಿದರು.


ದೇವಳದ ಜೀರ್ಣೋದ್ಧಾರ ಕಾರ್ಯ ಯಶಸ್ವಿಯಾಗಿ ಪೂರ್ಣಗೊಂಡು ಧಾರ್ಮಿಕ ಹಾಗೂ ಸಾಂಸ್ಕೃತಿಕ ಚಟುವಟಿಕೆಗಳ ಪ್ರಮುಖ ಕೇಂದ್ರವಾಗಿ ಇನ್ನಷ್ಟು ಬೆಳೆಯಲಿ ಎಂದು ಹಾರೈಸಿದರು.


ಜೀರ್ಣೋದ್ಧಾರ ಸಮಿತಿ ಅಧ್ಯಕ್ಷ ಶ್ರೀನಿಧಿ ಹೆಗ್ಡೆ, ಪ್ರಧಾನ ಕಾರ್ಯದರ್ಶಿ ಪ್ರಕಾಶ್ ನಾಯಕ್, ಪದಾಧಿಕಾರಿಗಳಾದ ಸೀತಾರಾಮ ಭಟ್, ಖಜಾಂಚಿ ಚಂದ್ರಶೇಖರ್ ನಾಯಕ್, ಜಯಪ್ರಕಾಶ್ ನಾಯಕ್, ಪಾಂಡುರಂಗ ಲಾಗ್ವಂಕರ್, ಮಂದಾರ ಮೋಘೆ, ಶಿಲ್ಪಿ ಕುಪ್ಪುಸ್ವಾಮಿ, ಪಾಂಡುರಂಗ ಲಾಗ್ವಂಕರ್, ಶ್ರೀಧರ ಭಟ್, ರಾಜಾರಾಮ್ ಭಟ್, ಹರೀಶ್ ಶೆಟ್ಟಿ, ಕಾಳಿದಾಸ್ ಭಂಡಾರಿ, ಕೃಷ್ಣ ಭಂಡಾರಿ, ಮಹೇಶ್ ಭಟ್, ಅಶೋಕ್ ನಾಯಕ್, ಶ್ರೀಧರ ನಾಯ್ಕ್, ಹರ್ಷಿತ್ ಆಚಾರ್ಯ, ರಮೇಶ್ ನಾಯಕ್ ಕಾಳಬೆಟ್ಟು, ವಾಸುದೇವ ನಾಯಕ್, ಸತೀಶ್ ಶೆಟ್ಟಿ, ಬಾಲಕೃಷ್ಣ ಭಟ್, ಮಹೇಶ್ ಪುತ್ರನ್, ಸುಧೀರ್ ಪೂಜಾರಿ, ಭಾಸ್ಕರ್ ಕುಲಾಲ್ ಮೊದಲಾದವರಿದ್ದರು.