ಲೋಕಬಂಧು ನ್ಯೂಸ್ | ಉಡುಪಿ, ಜೂ.14
ಕಟಪಾಡಿ ಶ್ರೀ ವಿಶ್ವನಾಥ ಕ್ಷೇತ್ರದ ಶ್ರೀ ನಾರಾಯಣ ಗುರು ಸೇವಾದಳ ನೇತೃತ್ವದಲ್ಲಿ ಪರೀಕದ ಶ್ರೀ ಧರ್ಮಸ್ಥಳ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನ ಸಹಯೋಗದೊಂದಿಗೆ ಭಾನುವಾರ ಕ್ಷೇತ್ರದ ಸಪ್ತಪದಿ ಹಾಲ್‌ನಲ್ಲಿ ಉಚಿತ ಆರೋಗ್ಯ ವೈದ್ಯಕೀಯ ಸೇವೆ ಹಮ್ಮಿಕೊಳ್ಳಲಾಯಿತು.
ವಿಶ್ವನಾಥ ಕ್ಷೇತ್ರದ ಅಧ್ಯಕ್ಷ ಮಹೇಶ್ ಅಂಚನ್ ಉದ್ಘಾಟಿಸಿ ಶುಭ ಹಾರೈಸಿದರು.
ಅಧಿಕ ರಕ್ತದೊತ್ತಡ, ಹೈಶುಗರ್, ಚರ್ಮ ರೋಗ, ಮಾನಸಿಕ ಒತ್ತಡ, ಬೊಜ್ಜು, ಪಿಸಿಒಡಿ ಇತ್ಯಾದಿ ಕಾಯಿಲೆಗಳಿಗೆ ತಜ್ಞ ಪ್ರಕೃತಿ ಚಿಕಿತ್ಸಾ ವೈದ್ಯರಿಂದ ಆರೋಗ್ಯ ಮಾರ್ಗದರ್ಶನ ನೀಡಲಾಯಿತು. ಫಿಸಿಯೋಥೆರಪಿ ಮತ್ತು ಸೂಜಿ ಚಿಕಿತ್ಸೆ ಬಗ್ಗೆಯೂ ಸಲಹೆ ನೀಡಲಾಯಿತು.
ಡಾ.ಹರ್ಷಿತ ಹೆಗ್ಡೆ, ಡಾ.ಅಜಿತ್ ಟಿ., ಡಾ.ಪವಿತ್ರ, ಡಾ.ಲಕ್ಷ್ಮೀ ಆರೋಗ್ಯ ತಪಾಸಣೆ ನಡೆಸಿದರು.
ಸಮಾರೋಪ ಸಮಾರಂಭದಲ್ಲಿ ಸೌಖ್ಯವನದ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲ ಪೂಜಾರಿ ಪ್ರಕೃತಿ ಚಿಕಿತ್ಸೆಯ ಮಹತ್ವ ಮತ್ತು ಪ್ರಸ್ತುತ ಜೀವನದಲ್ಲಿ ಅದರ ಅಗತ್ಯತೆ ಬಗ್ಗೆ ಮಾಹಿತಿ ನೀಡಿದರು.
ಸಂಸ್ಥೆ ವತಿಯಿಂದ ಅಧ್ಯಕ್ಷ ಮಹೇಶ್ ಅಂಚನ್ ಅವರನ್ನು ಗೌರವಿಸಲಾಯಿತು.
ಆಸ್ಪತ್ರೆಯ ಯೋಗ ವಿಭಾಗದ ಮುಖ್ಯಸ್ಥ ಡಾ.ಶೋಭಿತ್ ಶೆಟ್ಟಿ, ದೇವಸ್ಥಾನದ ಆಡಳಿತ ಸಮಿತಿಯ ಶ್ರೀನಿವಾಸ ಪೂಜಾರಿ ಇದ್ದರು.
ಸೌಖ್ಯವನದ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಮತ್ತು ವಿಶ್ವನಾಥ ಕ್ಷೇತ್ರದ ಆಡಳಿತ ಸಮಿತಿ ಕೋಶಾಧಿಕಾರಿ ರವಿ ಕೋಟ್ಯಾನ್ ಕಾರ್ಯಕ್ರಮ ಸಂಯೋಜಿಸಿದ್ದರು.
.jpg)
.jpg)