ಲೋಕಬಂಧು ನ್ಯೂಸ್ | ಪಡುಬಿದ್ರಿ, ಜೂ.13
ಕೇಂದ್ರ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ಶನಿವಾರ ಉಚ್ಚಿಲ ಶ್ರೀ ಮಹಾಲಕ್ಷ್ಮೀ ದೇವಸ್ಥಾನಕ್ಕೆ ಭೇಟಿ ನೀಡಿ ದೇವಿ ದರ್ಶನ ಪಡೆದರು. ದೇವಳದ ಪ್ರಧಾನ ಅರ್ಚಕ ರಾಘವೇಂದ್ರ ಉಪಾಧ್ಯಾಯ ಪ್ರಸಾದ ನೀಡಿದರು.
ಕ್ಷೇತ್ರದ ವಾಸ್ತುಶೈಲಿ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಮೊಗವೀರ ಸಮುದಾಯದವರಿಂದ ನಿರ್ಮಿತವಾದ ಕ್ಷೇತ್ರದ ಬಗ್ಗೆ ಪ್ರಶಂಸೆ ವ್ಯಕ್ತಪಡಿಸಿದರು.
ಪ್ರಧಾನಿ ಮೋದಿ ಪರಿಕಲ್ಪನೆಯ ಏಕ್ ಪೇಡ್ ಮಾ ಕೇ ನಾಮ್'ನಡಿ ದೇವಳದ ಆವರಣದಲ್ಲಿ ಸಸಿಯೊಂದನ್ನು ನೆಟ್ಟರು.
ಜಿಲ್ಲಾ ಬಿಜೆಪಿ ಅಧ್ಯಕ್ಷ ನವೀನ ಶೆಟ್ಟಿ ಕುತ್ಯಾರು, ಶಾಸಕರಾದ ಗುರ್ಮೆ ಸುರೇಶ ಶೆಟ್ಟಿ ಮತ್ತು ಯಶಪಾಲ್ ಸುವರ್ಣ, ಪಕ್ಷ ಪ್ರಮುಖರಾದ ಉದಯಕುಮಾರ್ ಶೆಟ್ಟಿ, ಉಚ್ಚಿಲ ಕ್ಷೇತ್ರಾಡಳಿತ ಸಮಿತಿ ಅಧ್ಯಕ್ಷ ಗಿರಿಧರ್ ಸುವರ್ಣ, ಪ್ರಧಾನ ಕಾರ್ಯದರ್ಶಿ ಶರಣ್ ಕುಮಾರ್ ಮಟ್ಟು, ಪ್ರಮುಖರಾದ ನಾರಾಯಣ ಸಿ. ಕರ್ಕೇರ, ಮೋಹನ್ ಬಂಗೇರ ಕಾಪು, ಯಾದವ್ ವಿ.ಕೆ., ಸತೀಶ್ ಸಾಲ್ಯಾನ್, ದಿನೇಶ್ ಎರ್ಮಾಳ್, ಮನೋಜ್ ಕಾಂಚನ್, ಸುಜಿತ್ ಕುಮಾರ್ ಕಾಪು, ಶಾಂಭವಿ ಕುಲಾಲ್, ಸಾವಿತ್ರಿ, ಆಶಾ ಮನೋಹರ್, ಶುಭ ಯೋಗೇಶ್ ಮೊದಲಾದವರಿದ್ದರು.


