ಜೂ.14: ಪ್ರಸಾದ್ ರಾಜ್ ಕಾಂಚನ್ ಹುಟ್ಟುಹಬ್ಬ- ರಕ್ತದಾನ ಶಿಬಿರ, ಸಾಮಾಜಿಕ ಕಾರ್ಯಕ್ರಮ

ಲೋಕಬಂಧು ನ್ಯೂಸ್ | ಉಡುಪಿ, ಜೂ.13
ಕಾಂಗ್ರೆಸ್ ಮುಂದಾಳು ಪ್ರಸಾದ್ ರಾಜ್ ಕಾಂಚನ್ ಹುಟ್ಟುಹಬ್ಬ ಅಂಗವಾಗಿ ಪ್ರಸಾದ್ ರಾಜ್ ಕಾಂಚನ್ ಅಭಿಮಾನಿ ಬಳಗ ನೇತೃತ್ವದಲ್ಲಿ ಸರಳಾ ಬಾಬುರಾಯ ಕಾಂಚನ್ ಚಾರಿಟೆಬಲ್ ಟ್ರಸ್ಟ್ ಸಹಯೋಗದೊಂದಿಗೆ ಜೂ.14ರಂದು ರಕ್ತದಾನ ಶಿಬಿರ ಸಹಿತ ವಿವಿಧ ಸಾಮಾಜಿಕ ‌ಕಾರ್ಯಕ್ರಮಗಳು ನಡೆಯಲಿದೆ.
ಬ್ರಹ್ಮಾವರ ಬಂಟರ ಭವನದಲ್ಲಿ ಬೆಳಿಗ್ಗೆ 10.30ರಿಂದ ರಕ್ತದಾನ ಶಿಬಿರ ನಡೆಯಲಿದೆ. ಎಸ್.ಎಸ್.ಎಲ್.ಸಿ, ಪಿಯುಸಿ ಮತ್ತು ಇತರ ಕ್ಷೇತ್ರಗಳ ಸಾಧಕರಿಗೆ ಸನ್ಮಾನ, ಆಟೋರಿಕ್ಷಾ ಚಾಲಕರಿಗೆ ಸಮವಸ್ತ್ರ ವಿತರಣೆ ನಡೆಯಲಿದೆ.
ಮನರಂಜನಾ ಕಾರ್ಯಕ್ರಮದಂಗವಾಗಿ ಸಂಗೀತ ರಸಮಂಜರಿ ಕಾರ್ಯಕ್ರಮ ಆಯೋಜಿಸಲಾಗಿದೆ ಎಂದು‌ ಸಂಘಟಕರ ಪ್ರಕಟಣೆ ತಿಳಿಸಿದೆ.