ರಾಮನ ಹೆಸರಲ್ಲಿ ಅಪಚಾರ ಮಾಡಿದರೆ ಶಿಕ್ಷೆ ಗ್ಯಾರಂಟಿ

ಲೋಕಬಂಧು ನ್ಯೂಸ್ ದಾವಣಗೆರೆ, ಜೂ.27
ದೇವರ ಹೆಸರನ್ನು ಬಳಸಿಕೊಂಡು ಯಾರಾದರೂ ಪಾಪದ ಕೆಲಸಗಳನ್ನು ಮಾಡಿದರೆ ಅವರಿಗಿಂತ ದೊಡ್ಡ ಪಾಪಿಗಳು ಈ ಜಗತ್ತಿನಲ್ಲಿ ಬೇರೊಬ್ಬರಿಲ್ಲ ಎಂದು ಕೇಂದ್ರ ಸಚಿವ ವಿ.ಸೋಮಣ್ಣ ಅಸಮಾಧಾನ ವ್ಯಕ್ತಪಡಿಸಿದರು.ಶನಿವಾರ ಸುದ್ದಿಗಾರರೊಂದಿಗೆ ಮಾತನಾಡಿ, ಭಗವಂತನ ಹೆಸರಿನಲ್ಲಿ ಪಾಪದ ಕೆಲಸ ಮಾಡುವವರ ವಿರುದ್ಧ ತೀಕ್ಷ್ಣ ಪ್ರತಿಕ್ರಿಯೆ ನೀಡಿದರು.


ಶ್ರೀರಾಮ ಮಂದಿರದಲ್ಲಿ ನಡೆದಿರುವ ದೇಣಿಗೆ ಹಣ ಕಳವು ಪ್ರಕರಣಕ್ಕೆ ಸಂಬಂಧಿಸಿದಂತೆ ಈಗಾಗಲೇ ಉತ್ತರ ಪ್ರದೇಶದ ಮುಖ್ಯಮಂತ್ರಿ ವಿಶೇಷ ತನಿಖಾ ತಂಡ (ಎಸ್ಐಟಿ)ದ ತನಿಖೆಗೆ ಆದೇಶಿಸಿದ್ದಾರೆ.


ರಾಮನ ಹೆಸರನ್ನು ಹೇಳಿಕೊಂಡು ಯಾರಾದರೂ ಅಪಚಾರ ಮಾಡಲು ಯತ್ನಿಸಿದರೆ, ಅಂಥವರಿಗೆ ತಕ್ಷಣದಲ್ಲೇ ತಕ್ಕ ಶಿಕ್ಷೆಯಾಗುವಂತೆ ಸ್ವತಃ ಆ ರಾಮನೇ ಸೃಷ್ಟಿ ಮಾಡುತ್ತಾನೆ. ಅದರಲ್ಲಿ ಯಾರೂ ಯಾರನ್ನೂ ಕ್ಷಮಿಸುವ ಪ್ರಶ್ನೆಯೇ ಬರುವುದಿಲ್ಲ ಎಂದರು.


ಇದೇ ಸಂದರ್ಭದಲ್ಲಿ ರೈಲ್ವೆ ಇಲಾಖೆಯ ಯೋಜನೆಗಳ ಬಗ್ಗೆ ಕೇಳಲಾದ ಪ್ರಶ್ನೆಗೆ ಉತ್ತರಿಸಿದ ಅವರು, ಇಲಾಖೆಯ ಅಭಿವೃದ್ಧಿ ಕಾರ್ಯಗಳು ಉತ್ತಮವಾಗಿ ಸಾಗುತ್ತಿವೆ ಮತ್ತು ಮುಂಬರುವ ದಿನಗಳಲ್ಲಿ ಇನ್ನಷ್ಟು ಸುಧಾರಣೆಗಳನ್ನು ಕಾಣಬಹುದು ಎಂದು ವಿಶ್ವಾಸ ವ್ಯಕ್ತಪಡಿಸಿದರು.