ಸಂತೆ ಮಾರುಕಟ್ಟೆಯಲ್ಲಿ ಅಗ್ನಿ ಅವಘಡ

ಲೋಕಬಂಧು ನ್ಯೂಸ್ ಉಡುಪಿ, ಜೂ.21
ನಗರದ ಆದಿವುಡುಪಿ ಸಂತೆ ಮಾರುಕಟ್ಟೆಯ ಹಣ್ಣು ಹಂಪಲು ಸಂಗ್ರಹ ಅಂಗಡಿಗೆ ಆಕಸ್ಮಿಕವಾಗಿ ಬೆಂಕಿ ತಗುಲಿ ಲಕ್ಷಾಂತರ ರೂ. ನಷ್ಟ ಸಂಭವಿಸಿದ ಘಟನೆ ಭಾನುವಾರ ನಡೆದಿದೆ.ವಿದ್ಯುತ್ ಶಾರ್ಟ್ ಸರ್ಕ್ಯೂಟ್'ನಿಂದ ಆಕಸ್ಮಿಕವಾಗಿ ಬೆಂಕಿ ತಗುಲಿದ್ದು ಹಣ್ಣು ಹಂಪಲು ಸಂಗ್ರಹಿಸಿದ್ದ ಬಾಕ್ಸ್'ಗೆ ಬೆಂಕಿ ತಗುಲಿ, ಅಂಗಡಿ ಸಂಪೂರ್ಣ ಸುಟ್ಟುಹೋಗಿದೆ.


ಅಗ್ನಿಶಾಮಕ ದಳದವರು ಕೂಡಲೇ ಆಗಮಿಸಿ, ಬೆಂಕಿ ನಂದಿಸುವಲ್ಲಿ ಯಶಸ್ವಿಯಾಗಿದ್ದಾರೆ.