ಲೋಕಬಂಧು ನ್ಯೂಸ್ | ಉಡುಪಿ, ಜೂ.14
ಪುತ್ತಿಗೆ ಮಠಾಧೀಶ ಶ್ರೀ ಸುಗುಣೇಂದ್ರತೀರ್ಥ ಶ್ರೀಪಾದರು ಮತ್ತು ಕಿರಿಯ ಶ್ರೀ ಸುಶ್ರೀಂದ್ರತೀರ್ಥ ಶ್ರೀಪಾದರ ಆಶಯದಂತೆ ಅಧಿಕ ಜ್ಯೇಷ್ಠ ಮಾಸ (ಪುರುಷೋತ್ತಮ ಮಾಸ) ಪ್ರಯುಕ್ತ ಲೋಕ ಕಲ್ಯಾಣಾರ್ಥವಾಗಿ ಶ್ರೀಮದ್ಭಗವದ್ಗೀತೆಯ 15ನೇ ಅಧ್ಯಾಯವನ್ನು 33 ಬಾರಿ ಸಾಮೂಹಿಕವಾಗಿ ಪಾರಾಯಣ ಗೀತಾ ಮಂದಿರದ ಶ್ರೀ ನೃಸಿಂಹ ಸಭಾಗೃಹದಲ್ಲಿ ನಡೆಸಲಾಯಿತು.
ಪುತ್ತಿಗೆ ಮಠದ ದಿವಾನ ನಾಗರಾಜ ಆಚಾರ್ಯ, ವಿದುಷಿ ಉಷಾ ಹೆಬ್ಬಾರ್, ನಗರಸಭೆ ಮಾಜಿ ಸದಸ್ಯ ನರಸಿಂಹ ನಾಯಕ್ ಉಪಸ್ಥಿತರಿದ್ದರು.
ಈ ಸಂದರ್ಭದಲ್ಲಿ ದೂರದರ್ಶನ ಕಲಾವಿದೆ ಅಯನ ವಿ. ರಮಣ್ ಮೂಡುಬಿದಿರೆ ಅವರಿಂದ ಶಾಸ್ತ್ರೀಯ ನೃತ್ಯಾಭಿವ್ಯಕ್ತಿ ಮತ್ತು ಕಿರು ನಿರೂಪಣಾ ವ್ಯಾಖ್ಯಾನ ನಡೆಯಿತು.
.jpg)
.jpg)
.jpg)