ಲೋಕಬಂಧು ನ್ಯೂಸ್ | ಉಡುಪಿ, ಜೂ.29
ಉತ್ತಮ ಮಳೆಗಾಗಿ ಪ್ರಾರ್ಥಿಸಿ, ಉಡುಪಿ ನಗರ ಬಿಜೆಪಿ ವತಿಯಿಂದ ಶಾಸಕ ಯಶಪಾಲ್ ಸುವರ್ಣ ನೇತೃತ್ವದಲ್ಲಿ ನಾಡಿನಾದ್ಯಂತ ಉತ್ತಮ ಮಳೆ, ಸಮೃದ್ಧ ಬೆಳೆ ಹಾಗೂ ಲೋಕಕಲ್ಯಾಣದ ಸಂಕಲ್ಪದೊಂದಿಗೆ ಸೋಮವಾರ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವಸ್ಥಾನದಲ್ಲಿ ಸೀಯಾಳ ಅಭಿಷೇಕ ನಡೆಸಲಾಯಿತು.
ಈ ಸಂದರ್ಭದಲ್ಲಿ ಮಾತನಾಡಿದ ಶಾಸಕ ಯಶಪಾಲ್ ಸುವರ್ಣ, ಕರಾವಳಿ ಜಿಲ್ಲೆ ಸಹಿತ ರಾಜ್ಯದಾದ್ಯಂತ ವಾಡಿಕೆಗಿಂತ ಕಡಿಮೆ ಪ್ರಮಾಣದಲ್ಲಿ ಮಳೆಯಾದ ಹಿನ್ನೆಲೆಯಲ್ಲಿ ಬನ್ನಂಜೆ ಶ್ರೀ ಮಹಾಲಿಂಗೇಶ್ವರ ದೇವರಿಗೆ ಸೀಯಾಳ ಅಭಿಷೇಕ ನಡೆಸುವ ಸಂಕಲ್ಪ ಮಾಡಿದ್ದು, ಇಂದು ಬೆಳಿಗ್ಗೆಯಿಂದಲೇ ಉಡುಪಿ ಜಿಲ್ಲೆಯಾದ್ಯಂತ ಉತ್ತಮ ಮಳೆಯಾಗಿರುವುದು ಸಂತಸ ತಂದಿದೆ ಎಂದರು.
ಉಡುಪಿ ನಗರ ಬಿಜೆಪಿ ಅಧಕ್ಷ ದಿನೇಶ್ ಅಮೀನ್, ನಗರಸಭೆ ಮಾಜಿ ಅಧ್ಯಕ್ಷ ಪ್ರಭಾಕರ ಪೂಜಾರಿ, ಮಾಜಿ ಸದಸ್ಯರಾದ ಅಶೋಕ್ ನಾಯ್ಕ್, ಸವಿತಾ ಹರೀಶ್ ರಾಮ್, ರಶ್ಮಿ ಸಿ. ಭಟ್, ಅನಿತ ಡಿ'ಸೋಜ ಮತ್ತು ಟಿ.ಜಿ.ಹೆಗ್ಡೆ, ಮಂಡಲದ ಪ್ರಧಾನ ಕಾರ್ಯದರ್ಶಿ ಜಗದೀಶ್ ಆಚಾರ್ಯ ಕಪ್ಪೆಟ್ಟು, ರಶ್ಮಿತಾ ಬಾಲಕೃಷ್ಣ ಶೆಟ್ಟಿ, ಪಕ್ಷದ ಪ್ರಮುಖರಾದ ಡೆನಿಸ್ ಮಸ್ಕರೇನ್ಹಸ್, ಕಿಶೋರ್ ಕುಮಾರ್, ಆನಂದ ಮಠದಬೆಟ್ಟು, ಶಂಕರ ಕುಲಾಲ್, ನೀತಾ ಪ್ರಭು, ಶ್ರೀವತ್ಸ, ಅರುಣ್ ಮಲ್ಪೆ, ಹಿಂದೂ ಯುವಸೇನೆ ಜಿಲ್ಲಾಧ್ಯಕ್ಷರಾದ ಅಜಿತ್ ಕೊಡವೂರು, ಗುರುರಾಜ್ ಭಂಡಾರಿ, ಗೋಪಾಲ ಪೂಜಾರಿ, ಸಂತೋಷ್ ಆಚಾರ್ಯ, ನಿತ್ಯಾನಂದ ಕಾಮತ್, ಸುರೇಶ್ ಆಚಾರ್ಯ, ವಿರಾಜ್, ಭೂಷಣ್, ನಿಖಿಲ್ ಮಡಿವಾಳ, ಸುಜಲ ಸುವರ್ಣ, ದೀಪಾ ಪೈ, ಸುಲತಾ, ಸುಗುಣ ನಾಯ್ಕ್, ಸುಜಾತ ಶೆಟ್ಟಿ, ಪ್ರಜ್ಞಾ ಶೆಟ್ಟಿ, ಪೂರ್ಣಿಮ ಶೆಟ್ಟಿ ಮೊದಲಾದವರಿದ್ದರು.
