ಪರ್ಯಾಯ ಶ್ರೀಗಳ ಮತಪಟ್ಟಿ ಪರಿಶೀಲನೆ

ಲೋಕಬಂಧು | ನ್ಯೂಸ್ ಉಡುಪಿ, ಜೂ.30
ಎಸ್ಐಆರ್ ಅಭಿಯಾನ ಅಂಗವಾಗಿ ಜಿಲ್ಲಾಧಿಕಾರಿ ಸ್ವರೂಪ ಟಿ.ಕೆ.‌ ಮಂಗಳವಾರ ಶ್ರೀಕೃಷ್ಣ ಮಠಕ್ಕೆ ಭೇಟಿ ನೀಡಿ ಪರ್ಯಾಯ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರಿಗೆ ಎನುಮರೇಷನ್ ಅರ್ಜಿ ನೀಡಿದರು.
ಅಭಿಯಾನ ಯಶಸ್ವಿಯಾಗಿ ನಡೆಯುವಂತೆ ಹಾರೈಸಿದ ಶ್ರೀಪಾದರು, ಎಸ್ಐಆರ್ ಅಭಿಯಾನ ಯಶಸ್ವಿಗೊಳಿಸಲು ಸಾರ್ವಜನಿಕರು ಹಾಗೂ ಸಂಬಂಧಿತ ಅಧಿಕಾರಿಗಳು ಸಹಕರಿಸುವಂತೆ ತಿಳಿಸಿದರು.
ತಹಶಿಲ್ದಾರರ್ ಗುರುರಾಜ್ ಮತ್ತು ಬಿಎಲ್ಓ ಶ್ವೇತ ಹಾಗೂ ಮಠದ ಪಾರುಪತ್ಯೆಗಾರ ಶ್ರೀಶ ಭಟ್ ಕಡೆಕಾರು ಇದ್ದರು.