ಲೋಕಬಂಧು ನ್ಯೂಸ್ ಮಣಿಪಾಲ, ಜು.2
ಪರ್ಕಳ ಸಮೀಪದ ಪರೀಕ ಶ್ರೀ ಧರ್ಮಸ್ಥಳ ಮಂಜುನಾಥೇಶ್ವರ ಯೋಗ ಮತ್ತು ಪ್ರಕೃತಿ ಚಿಕಿತ್ಸಾ ಆಸ್ಪತ್ರೆ ಸೌಖ್ಯವನದಲ್ಲಿ ಬುಧವಾರ ವೈದ್ಯರ ದಿನಾಚರಣೆ ಮಾಡಲಾಯಿತು.ಆಸ್ಪತ್ರೆಯ ಕ್ಷೇಮ ಹಾಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲ ಪೂಜಾರಿ, ಸ್ಥಾನಿಕ ವೈದ್ಯಾಧಿಕಾರಿ ಆಗಿರುವ ಡಾ.ಶೋಭಿತ್ ಶೆಟ್ಟಿ, ಡಾ.ಅಂಜಲಿ ಇಡಾಲಿಯಂ, ಡಾ.ಪೂಜಾ, ಡಾ.ಹರ್ಷಿತ ಹೆಗ್ಡೆ, ಡಾ.ಅನ್ವಿತ, ಡಾ.ಅಜಿತ್, ಡಾ.ಪವಿತ್ರ, ಡಾ.ಚೇತನ, ಡಾ.ಲಕ್ಷ್ಮೀ ಮತ್ತು ಯೋಗ ಶಿಕ್ಷಕ ಕೃಷ್ಣಕುಮಾರ್ ಅವರನ್ನು ಸೌಖ್ಯವನದ ಹಿರಿಯ ಸಿಬ್ಬಂದಿಗಳು ಗೌರವಿಸಿದರು.ಕವಯತ್ರಿ ಅರುಣಾ ಹೆಬ್ರಿ ವೈದ್ಯರ ಬಗ್ಗೆ ಬರೆದ ಕವನವನ್ನು ಆಡಳಿತ ವಿಭಾಗದ ದೀಪಾ ಶೆಟ್ಟಿ ವಾಚಿಸಿದರು.
ಸಾಧಕರಾದ ಗೀತಾ ಫೌಂಡೇಷನ್'ನ ಪ್ರಶಾಂತ್ ಕುಂದರ್ ವೈದ್ಯರ ಸೇವೆ ಬಗ್ಗೆ ತಿಳಿಸಿ, ಕಳೆದ ಹತ್ತು ವರ್ಷಗಳಿಂದ ತಾನು ಚಿಕಿತ್ಸೆ ಪಡೆಯುತ್ತಿದ್ದು ಉತ್ತಮ ಗುಣಮಟ್ಟದ ಸೇವೆಯಿಂದ ಸಂತೃಪ್ತನಾಗಿರುವುದಾಗಿ ತಿಳಿಸಿ, ಪ್ರತಿಯೊಬ್ಬರೂ ಪ್ರಕೃತಿ ಚಿಕಿತ್ಸೆ ಬಗ್ಗೆ ಅರಿತುಕೊಳ್ಳುವುದು ಸೂಕ್ತ ಎಂದರು.
ಸನ್ಮಾನಕ್ಕೆ ಉತ್ತರಿಸಿದ ಮುಖ್ಯ ವೈದ್ಯಾಧಿಕಾರಿ ಡಾ.ಗೋಪಾಲ ಪೂಜಾರಿ, ವೈದ್ಯರಿಗೆ ಸಮಾಜದಲ್ಲಿ ವೈದ್ಯರಿಗಿರುವ ಗೌರವದ ಬಗ್ಗೆ ತಿಳಿಸಿದರು.
ಸೌಖ್ಯವನದ ವ್ಯವಸ್ಥಾಪಕ ಪ್ರವೀಣ್ ಕುಮಾರ್ ಸ್ವಾಗತಿಸಿ, ನಿರೂಪಿಸಿದರು.
ಡಾ.ನಿರ್ವಾಣ್ ವಂದಿಸಿದರು.