ಪ್ರಸಾದ್ ನೇತ್ರಾಲಯದಲ್ಲಿ ವೈದ್ಯರ ದಿನಾಚರಣೆ

ಲೋಕಬಂಧು ನ್ಯೂಸ್ | ಉಡುಪಿ, ಜು.1
ಪ್ರಸಾದ್ ನೇತ್ರಾಲಯ ಸೂಪರ್ ಸ್ಪೆಷಾಲಿಟಿ ಕಣ್ಣಿನ ಆಸ್ಪತ್ರೆಯಲ್ಲಿ ಬುಧವಾರ ರಾಷ್ಟ್ರೀಯ ವೈದ್ಯರ ದಿನ ಆಚರಿಸಲಾಯಿತು.
ಮುಖ್ಯ ಅತಿಥಿಯಾಗಿದ್ದ ಜಿಲ್ಲಾಸ್ಪತ್ರೆಯ ಜಿಲ್ಲಾ ಸರ್ಜನ್ ಡಾ.ಅಶೋಕ್ ಕುಮಾರ್ ಎಚ್., ಶುಶ್ರೂಷಾ ಪದ್ಧತಿಯ ಭೇದವಿಲ್ಲದೇ ಎಲ್ಲಾ ವೈದ್ಯರನ್ನು ಪ್ರಸಾದ್ ನೇತ್ರಾಲಯ ಗೌರವಿಸುತ್ತಿರುವುದು ಶ್ಲಾಘನೀಯ ಎಂದರು.


ಇನ್ನೋರ್ವ ಅತಿಥಿ ಐಎಂಎ ಉಡುಪಿ- ಕರಾವಳಿ ಅಧ್ಯಕ್ಷ ಮತ್ತು ಮಕ್ಕಳ ತಜ್ಞ ಡಾ.ಅಶೋಕ್ ಕುಮಾರ್, ವೈದ್ಯರಿಗೆ ಸಮಸ್ಯೆ ಬಂದಾಗ ಒಗ್ಗಟ್ಟಾಗಿ ಹೋರಾಡುವುದು ಇಂದಿನ ಅಗತ್ಯ ಎಂದರು.


ಅಧ್ಯಕ್ಷತೆ ವಹಿಸಿದ್ದ ಪ್ರಸಾದ್ ನೇತ್ರಾಲಯ ಸಮೂಹ ಕಣ್ಣಿನ ಆಸ್ಪತ್ರೆಗಳ ವೈದ್ಯಕೀಯ ನಿರ್ದೇಶಕ ಡಾ.ಕೃಷ್ಣಪ್ರಸಾದ್ ಕೂಡ್ಲು ವೈದ್ಯರು ಎದುರಿಸುತ್ತಿರುವ ಸಮಸ್ಯೆಗಳ ಬಗ್ಗೆ ವಿವರಿಸಿ, ಅವುಗಳ ನಿವಾರಣೆಗೆ ಸರಕಾರ ಗಮನಿಸಬಹುದಾದ ಅಂಶಗಳ ಬಗ್ಗೆ ವಿವರಿಸಿದರು.


ಈ ಸಂದರ್ಭದಲ್ಲಿ ಪೆರ್ಡೂರಿನ ಡಾ.ಜಿ.ಎಸ್.ಕೆ. ಭಟ್, ಶಸ್ತ್ರಚಿಕಿತ್ಸಕ ಡಾ.ವೈ.ಸುದರ್ಶನ್ ರಾವ್, ಸಾಸ್ತಾನದ ಡಾ.ಹೇಮಂತ್ ಕುಮಾರ್, ಭಟ್ಕಳದ ಡಾ.ವಿಶ್ವನಾಥ ನಾಯಕ್, ತೆಕ್ಕಟ್ಟೆಯ ಡಾ.ಕುಸುಮಾಕರ್ ಶೆಟ್ಟಿ, ಕುಕ್ಕಿಕಟ್ಟೆಯ ಡಾ.ಮನಮೋಹನ ಶೆಟ್ಟಿ, ಉಡುಪಿಯ ಡಾ.ನರೇಂದ್ರ ಶೆಣೈ ಹಾಗೂ ಪ್ರಸಾದ್ ನೇತ್ರಾಲಯದ ನೇತ್ರತಜ್ಞರಾದ ಡಾ.ಪರೇಶ್ ಪೂಜಾರಿ, ಡಾ.ಶಮಂತ್ ಶೆಟ್ಟಿ, ಡಾ.ಜಾಕೋಬ್ ಚಾಕೋ, ಡಾ.ಅಪರ್ಣಾ ನಾಯಕ್, ಡಾ.ಸಚಿನ್ ಮತ್ತು ಡಾ.ರಿಯಾ ಬಾತ್ರಾ ಅವರನ್ನು ಸನ್ಮಾನಿಸಲಾಯಿತು.


ಪ್ರಸಾದ್ ನೇತ್ರಾಲಯದ ಆಡಳಿತ ನಿರ್ದೇಶಕಿ ರಶ್ಮಿ ಕೃಷ್ಣ ಪ್ರಸಾದ್ ಇದ್ದರು.


ಸಂಸ್ಥೆಯ ಮುಖ್ಯ ಆಡಳಿತಾಧಿಕಾರಿ ಎಂ.ವಿ. ಆಚಾರ್ಯ ಸ್ವಾಗತಿಸಿ, ನಿರೂಪಿಸಿದರು.