ಕೃಷ್ಣಮಠದಲ್ಲಿ ಪಂಚಕಜ್ಜಾಯ ತಯಾರಿ ಯಂತ್ರ ಉದ್ಘಾಟನೆ

ಲೋಕಬಂಧು ನ್ಯೂಸ್ ಉಡುಪಿ, ಜು.2
ಶ್ರೀಕೃಷ್ಣ ಮಠದಲ್ಲಿ ಮುಖ್ಯಪ್ರಾಣ ದೇವರಿಗೆ ಪ್ರತಿನಿತ್ಯ ನಡೆಯುವ ರಂಗಪೂಜೆಯ ಪಂಚಕಜ್ಜಾಯಕ್ಕೆ ಬಳಸುವ ಕಡ್ಲೆ ಹುರಿಯುವ ಯಂತ್ರ ಮತ್ತು ಪುಡಿ ಮಾಡುವ ನೂತನ ಯಂತ್ರವನ್ನು ಪರ್ಯಾಯ ಪೀಠಾಧೀಶ ಶೀರೂರು ಮಠಾಧೀಶ ಶ್ರೀ ವೇದವರ್ಧನತೀರ್ಥ ಶ್ರೀಪಾದರು ಗುರುವಾರ ಯಂತ್ರ ಚಾಲನೆಗೊಳಿಸುವ ಮೂಲಕ ಉದ್ಘಾಟಿಸಿದರು.ಮಠದ ದಿವಾನ ಡಾ.ಉದಯಕುಮಾರ್ ಸರಳತ್ತಾಯ ಇದ್ದರು.