ಲೋಕಬಂಧು ನ್ಯೂಸ್ | ಮಲ್ಪೆ, ಜು.1
ಮಾಜಿ ಸಚಿವ ಹಾಗೂ ಬಿಜೆಪಿ ಮುಂದಾಳು ಪ್ರಮೋದ್ ಮಧ್ವರಾಜ್ ಅವರ ಮಾಜಿ ಆಪ್ತ ಸಹಾಯಕ ಸಂದೀಪ್ ಸಾಲ್ಯಾನ್ (40) ಗೋವಾದ ಕಲ್ಲಂಗೂಟ್ ಬೀಚ್ ಸಮೀಪದ ಗೆಸ್ಟ್ ಹೌಸ್‌ನಲ್ಲಿ ಸಂಶಯಾಸ್ಪದವಾಗಿ ಸಾವನ್ನಪ್ಪಿದ್ದಾರೆ.
ಮಲ್ಪೆ ನಿವಾಸಿಯಾಗಿರುವ ಸಂದೀಪ್ ಸಾಲ್ಯಾನ್, ಹಲವು ವರ್ಷಗಳ ಹಿಂದೆ ಪ್ರಮೋದ್ ಮಧ್ವರಾಜ್ ಅವರ ಆಪ್ತ ಸಹಾಯಕರಾಗಿ ಕಾರ್ಯನಿರ್ವಹಿಸುತ್ತಿದ್ದರು. ಬಳಿಕ ಆ ಕೆಲಸ ತೊರೆದು, ಮಲ್ಪೆಯಲ್ಲಿ ಪ್ರವಾಸಿ ಬೋಟ್ ವ್ಯವಹಾರ ನಡೆಸುತ್ತಿದ್ದರು.
ಕಳೆದ ಮೂರು ದಿನಗಳ ಹಿಂದೆ ಪ್ರವಾಸ ನಿಮಿತ್ತ ಗೋವಾಕ್ಕೆ ತೆರಳಿದ್ದ ಸಂದೀಪ್, ಕಲ್ಲಂಗೂಟ್ ಬೀಚ್ ಸಮೀಪದ ಗೆಸ್ಟ್ ಹೌಸ್‌ನಲ್ಲಿ ಮಂಗಳವಾರ ಮೃತ ಸ್ಥಿತಿಯಲ್ಲಿ ಪತ್ತೆಯಾಗಿದ್ದು, ಅವರ ಸಾವಿನ ನಿಖರ ಕಾರಣ ತಿಳಿದುಬಂದಿಲ್ಲ. ಹೃದಯಾಘಾತದಿಂದ ಸಾವಾಗಿರಬಹುದು ಎಂದು ಹೇಳಲಾಗಿದ್ದರೂ ಕೆಲವು ಅನುಮಾನಾಸ್ಪದ ಬೆಳವಣಿಗೆಗಳ ಹಿನ್ನೆಲೆಯಲ್ಲಿ ಸದು ಸಹಜ ಸಾವೋ ಅಥವಾ ಕೊಲೆಯೋ ಎಂಬ ಶಂಕೆ ಮೂಡಿದೆ.
ಗೋವಾ ಪೊಲೀಸರು ಪ್ರಕರಣ ದಾಖಲಿಸಿ, ತನಿಖೆ ನಡೆಸುತ್ತಿದ್ದಾರೆ.
