ರೋಟರಿ ಕ್ಲಬ್ ಕೋಟೇಶ್ವರ: ಅಧ್ಯಕ್ಷೆ ಅಕ್ಷತಾ ಗಿರೀಶ್, ಕಾರ್ಯದರ್ಶಿ ಅರುಣ್ ದೇವಾಡಿಗ

ಲೋಕಬಂಧು ನ್ಯೂಸ್ ಕುಂದಾಪುರ, ಜು.2
ರೋಟರಿ ಕ್ಲಬ್ ಕೋಟೇಶ್ವರದ ನೂತನ ಅಧ್ಯಕ್ಷೆಯಾಗಿ ಪತ್ರಕರ್ತೆ, ನಿರೂಪಕಿ ಅಕ್ಷತಾ ಗಿರೀಶ್  ಹಾಗೂ ಕಾರ್ಯದರ್ಶಿಯಾಗಿ  ಅರುಣ್ ದೇವಾಡಿಗ ಆಯ್ಕೆಯಾಗಿದ್ದಾರೆ.ನೂತನ ಅಧ್ಯಕ್ಷೆ ಅಕ್ಷತಾ ಗಿರೀಶ್ ಅವರು 'ಉಡುಪಿ ಟೈಮ್ಸ್'ನ ವರದಿಗಾರ್ತಿ. ಜೊತೆಗೆ ಕಾರ್ಯಕ್ರಮ ನಿರೂಪಕಿಯಾಗಿ, ಟಿವಿ ನಿರೂಪಕಿಯಾಗಿಯೂ ಛಾಪು ಮೂಡಿಸಿದ್ದಾರೆ.


ಜೆಸಿಐ ಕುಂದಾಪುರದ ಪೂರ್ವಾಧ್ಯಕ್ಷೆಯಾಗಿ, ಜೆಸಿಐ ವಲಯ ಉಪಾಧ್ಯಕ್ಷೆಯಾಗಿ, ಅನ್ ಕ್ಲಬ್ ಕೋಟೇಶ್ವರ ಅಧ್ಯಕ್ಷೆಯಾಗಿದ್ದರು. ಕುಂದಾಪುರ ತಾಲೂಕು ಕನ್ನಡ ಸಾಹಿತ್ಯ ಪರಿಷತ್ ಗೌರವ ಕಾರ್ಯದರ್ಶಿಯಾಗಿದ್ದಾರೆ.


ಕಾರ್ಯದರ್ಶಿ ಅರುಣ ದೇವಾಡಿಗ ಯುವ ಉದ್ಯಮಿ. ರೋಟರ್ಯಾಕ್ಟ್ ಅಧ್ಯಕ್ಷರಾಗಿದ್ದರು.