ತಾಳಿಪಾಡಿ ಮಠ: ಗಣ್ಯರಿಗೆ ಸನ್ಮಾನ

ಲೋಕಬಂಧು ನ್ಯೂಸ್, ಕಿನ್ನಿಗೋಳಿ
ಇಲ್ಲಿಗೆ ಸಮೀಪದ ತಾಳಿಪಾಡಿ ಮಠ ಶ್ರೀ ಲಕ್ಷ್ಮೀವೆಂಕಟರಮಣ ದೇವಸ್ಥಾನದಲ್ಲಿ ನಡೆಯುತ್ತಿರುವ 19ನೇ ಪ್ರತಿಷ್ಠಾ ವರ್ಧಂತ್ಯುತ್ಸವ ಹಾಗೂ ವಾರ್ಷಿಕ ಜಾತ್ರಾ ಮಹೋತ್ಸವ ಪ್ರಯುಕ್ತ ಶುಕ್ರವಾರ ಬಪ್ಪನಾಡು ಶ್ರೀ ದುರ್ಗಾಪರಮೇಶ್ವರಿ ಪ್ರಸಾದಿತ ದಶಾವತಾರ ಯಕ್ಷಗಾನ ಮಂಡಳಿಯವರಿಂದ ಯಕ್ಷಗಾನ ನಡೆಯಿತು.ಈ ಸಂದರ್ಭದಲ್ಲಿ ಮೇಳದ ಅರ್ಚಕ ಗುರುರಾಜ ಭಟ್, ಮ್ಯಾನೇಜರ್ ಭವಾನಿಶಂಕರ ಶೆಟ್ಟಿ ಮತ್ತು ಪ್ರಧಾನ ಕಲಾವಿದ ರಾಮಕೃಷ್ಣ ಆಚಾರ್ಯ ನಂದಿಕೂರ ಅವರನ್ನು ಗೌರವಿಸಲಾಯಿತು.


ದೇವಸ್ಥಾನದ ಆಡಳಿತ ಸಮಿತಿ ಅಧ್ಯಕ್ಷ ದಯಾನಂದ ಭಟ್  ಕೊಲ್ಲೂರು ಮಠ, ಪ್ರಮುಖರಾದ ವಿವೇಕಾನಂದ, ನಾರಾಯಣ ಶೆಟ್ಟಿ ಮೂಡ್ರಗುತ್ತು, ಕುಶಲ ಪೂಜಾರಿ, ದಿವಾಕರ ಕರ್ಕೇರ, ದಯಾನಂದ ಕೋಟ್ಯಾನ್, ರಾಘವೇಂದ್ರ ಭಟ್ ಮೊದಲಾದವರಿದ್ದರು.