ಮಾ.3: ಧರ್ಮಸ್ಥಳದಲ್ಲಿ ದೇವರ ದರ್ಶನ ಸಮಯದಲ್ಲಿ ವ್ಯತ್ಯಯ

ಉಜಿರೆ | ಲೋಕಬಂಧು ನ್ಯೂಸ್
ಮಾರ್ಚ್ 3ರಂದು ಅಪರಾಹ್ನ ಗಂಟೆ 3.19ರಿಂದ ಸಂಜೆ 6.48ರ ವರೆಗೆ ಚಂದ್ರಗ್ರಹಣ ಇರುವುದರಿಂದ ಅಂದು ಮಧ್ಯಾಹ್ನ 1.30 ಗಂಟೆ ವರೆಗೆ ಮಾತ್ರ ಧರ್ಮಸ್ಥಳದಲ್ಲಿ ದೇವರ ದರ್ಶನಕ್ಕೆ ಅವಕಾಶವಿದೆ.
ರಾತ್ರಿ ಗಂಟೆ 7.30ರ ನಂತರ ಚಂದ್ರಗ್ರಹಣ ಮುಕ್ತಾಯವಾದ ಬಳಿಕ ದೇವಸ್ಥಾನದ ಶುದ್ಧೀಕರಣ ಹಾಗೂ ಇತರ ಧಾರ್ಮಿಕ ವಿಧಿ-ವಿಧಾನಗಳ ತರುವಾಯ ದೇವರ ದರ್ಶನಕ್ಕೆ ಅವಕಾಶ ಕಲ್ಪಿಸಲಾಗುವುದು. ದೂರದ ಊರುಗಳಿಂದ ಬರುವ ಭಕ್ತರು ದೇವರ ದರ್ಶನದ ಸಮಯದಲ್ಲಿನ ವ್ಯತ್ಯಯವನ್ನು ಗಮನಿಸುವಂತೆ ಕ್ಷೇತ್ರದ ಪ್ರಕಟನೆ ತಿಳಿಸಿದೆ.


ಹೆಚ್ಚಿನ ಮಾಹಿತಿಗೆ 9945725511ನ್ನು ಸಂಪರ್ಕಿಸಬಹುದು‌.