ಲೋಕಬಂಧು ನ್ಯೂಸ್, ಉಡುಪಿ
ದೊಡ್ಡಣಗುಡ್ಡೆ ಡಾ.ಎ.ವಿ. ಬಾಳಿಗ ಸ್ಮಾರಕ ಆಸ್ಪತ್ರೆ ವತಿಯಿಂದ ಫೆಬ್ರವರಿ 8ರಿಂದ 14ರ ವರೆಗೆ `ಪೋಷಕರ ಮದ್ಯವ್ಯಸನ ಮತ್ತು ಮಕ್ಕಳು' ಕುರಿತು ಜಾಗೃತಿ ಸಪ್ತಾಹ ಆಚರಿಸಲಾಗುತ್ತಿದೆ.ಸಪ್ತಾಹದ ಅಂಗವಾಗಿ ವಿವಿಧ ಕಾರ್ಯಕ್ರಮಗಳನ್ನು ಹಮ್ಮಿಕೊಳ್ಳಲಾಗಿದ್ದು, ಫೆ.8ರಂದು ಖ್ಯಾತ ಶಿಕ್ಷಣ ತಜ್ಞ ಡಾ.ಗುರುರಾಜ ಕರ್ಜಗಿ ಅವರಿಂದ ಶಿಕ್ಷಕರು ಹಾಗೂ ಪೋಷಕರಿಗೆ ವಿಶೇಷ ಉಪನ್ಯಾಸ ಕಾರ್ಯಕ್ರಮವಿದೆ.
ಇದೇ ಸಂದರ್ಭದಲ್ಲಿ ಡಾ. ಕರ್ಜಗಿ ಅವರ `ಸಾಕ್ಷಿ' ಹಾಗೂ ಮನೋವೈದ್ಯ ಡಾ.ವಿರೂಪಾಕ್ಷ ದೇವರಮನೆ ಅವರ `ಕಲಿಸು ಗುರುವೇ ಕಲಿಸು' ಪುಸ್ತಕಗಳು ಅನಾವರಣಗೊಳ್ಳಲಿವೆ.
ಕಾರ್ಯಕ್ರಮ ಅಪರಾಹ್ನ 2.30ರಿಂದ ಇನ್ಫೋಸಿಸ್ ಯಕ್ಷಗಾನ ಕಲಾರಂಗ ಸಭಾಭವನದಲ್ಲಿ ಆಯೋಜಿಸಲಾಗಿದೆ ಎಂದು ಸಂಘಟಕರ ಪ್ರಕಟಣೆ ತಿಳಿಸಿದೆ.