ಉಜಿರೆ | ಲೋಕಬಂಧು ನ್ಯೂಸ್
ಮಹಾಶಿವರಾತ್ರಿ ಅಂಗವಾಗಿ ನಾಡಿನೆಲ್ಲೆಡೆಯಿಂದ ಫೆ. 15ರಂದು ಧರ್ಮಸ್ಥಳಕ್ಕೆ 50 ಸಾವಿರಕ್ಕೂ ಅಧಿಕ ಪಾದಯಾತ್ರಿಗಳು ಆಗಮಿಸುವ ನಿರೀಕ್ಷೆ ಇದ್ದು, ಅವರ ಸ್ವಾಗತ ಹಾಗೂ ವಸತಿ ಸೌಲಭ್ಯಕ್ಕೆ ಸಕಲ ಸಿದ್ಧತೆ ಮಾಡಲಾಗಿದ್ದು ಧರ್ಮಸ್ಥಳದ ಮುಖ್ಯ ಪ್ರವೇಶದ್ವಾರದ ಬಳಿ ಸ್ವಾಗತ ಕಾರ್ಯಾಲಯವನ್ನು ಗುರುವಾರ ಧರ್ಮಾಧಿಕಾರಿ ಡಾ.ವೀರೇಂದ್ರ ಹೆಗ್ಗಡೆಯವರ ಆಪ್ತ ಕಾರ್ಯದರ್ಶಿ ಎ.ವಿ. ಶೆಟ್ಟಿ ಉದ್ಘಾಟಿಸಿದರು.
ಧರ್ಮಸ್ಥಳ ಗ್ರಾಮ ಪಂಚಾಯತ್ ಉಪಾಧ್ಯಕ್ಷ ಶ್ರೀನಿವಾಸ ರಾವ್, ಅನ್ನಪೂರ್ಣ ಭೋಜನಾಲಯದ ವ್ಯವಸ್ಥಾಪಕ ಸುಬ್ರಹ್ಮಣ್ಯಪ್ರಸಾದ್, ಕ್ಷೇತ್ರದ ನೌಕರರು, ಯುವತಿ ಮಂಡಲದ ಸದಸ್ಯೆಯರು ಮತ್ತು ಊರಿನ ನಾಗರಿಕರು ಉಪಸ್ಥಿತರಿದ್ದರು.
ಅಲ್ಲಿ ತಂಪು ಪಾನೀಯ ಮತ್ತು ಕುಡಿಯುವ ನೀರಿನ ಸೌಲಭ್ಯ, ಅಂಬ್ಯುಲೆನ್ಸ್ ಸೇವೆ, ತುರ್ತು ಆರೋಗ್ಯ ಸೇವೆ, ಮಾಹಿತಿ ವಿಭಾಗ, ಪೊಲೀಸ್ ಚೌಕಿಯನ್ನೂ ತೆರೆಯಲಾಗಿದೆ.
ಉಜಿರೆಯಲ್ಲಿ ಎಸ್.ಡಿ.ಎಂ. ಶಿಕ್ಷಣ ಸಂಸ್ಥೆಗಳಲ್ಲಿ ಹಾಗೂ ಧರ್ಮಸ್ಥಳದಲ್ಲಿ ವಸತಿ ಛತ್ರಗಳಲ್ಲಿ ಪಾದಯಾತ್ರಿಗಳಿಗೆ ವಸತಿ ವ್ಯವಸ್ಥೆ ಮಾಡಲಾಗಿದೆ.
ಎಲ್ಲಾ ಕಡೆ ಸುರಕ್ಷತೆ ಮತ್ತು ಸ್ವಚ್ಛತೆಗೆ ಆದ್ಯತೆ ನೀಡಲಾಗಿದೆ. ಸ್ವಯಂ-ಸೇವಕರು ಪಾದಯಾತ್ರಿಗಳ ಸೇವೆಗೆ ಸಜ್ಜಾಗಿದ್ದಾರೆ.
.jpg)
.jpg)