ಪರಿಷತ್ ಸದಸ್ಯ ಸಿ‌.ಟಿ. ರವಿ ಸದನದಿಂದ ಹೊರಕ್ಕೆ

ಲೋಕಬಂಧು ನ್ಯೂಸ್, ಬೆಂಗಳೂರು
ಪಾಕಿಸ್ತಾನದ ನಾಲಿಗೆ ಎಂಬ ಹೇಳಿಕೆ ನೀಡಿದ್ದ ವಿಧಾನ ಪರಿಷತ್‌ ಸದಸ್ಯ ಸಿ.ಟಿ.ರವಿ ಅವರನ್ನು ಒಂದು ದಿನದ ಮಟ್ಟಿಗೆ ಅಮಾನತು ಮಾಡಲಾಗಿದೆ ಎಂದು ಸಭಾಪತಿ ಬಸವರಾಜ ಹೊರಟ್ಟಿ ತಿಳಿಸಿದ್ದಾರೆ.ಕಾಂಗ್ರೆಸ್ ಸದಸ್ಯ ನಜೀರ್‌ ಅಹ್ಮದ್‌, ಪ್ರಧಾನಿ ಮೋದಿ ಅವರನ್ನು 'ದೇಶದ್ರೋಹಿ' ಎಂದು ಹೇಳಿದ್ದಕ್ಕೆ ಪ್ರತಿಯಾಗಿ ಕಿಡಿಕಾರಿದ್ದ ಸಿ.ಟಿ.ರವಿ ಪಾಕಿಸ್ತಾನ ನಾಲಿಗೆ ಮಾತ್ರ ಈ ತರಹ ಮಾತನಾಡುತ್ತದೆ ಎಂದು ಆಕ್ರೋಶ ಹೊರಹಾಕಿದ್ದರು.


ಸದನಕ್ಕೆ ಸಿ.ಟಿ. ರವಿ ಬಂದರೆ ಹೊರಗೆ ನಿಲ್ಲಿಸುವಂತೆಯೂ ಪರಿಷತ್ ಮುಖ್ಯ ಮಾರ್ಷಲ್‌ಗೆ ಸಭಾಪತಿ ಹೊರಟ್ಟಿ ತಾಕೀತು ಮಾಡಿದ್ದರು.