ಲೋಕಬಂಧು ನ್ಯೂಸ್, ಪಡುಬಿದ್ರಿ
ಉಡುಪಿಗೆ ಕೇರಳದಿಂದ ಪ್ರವಾಸಕ್ಕೆಂದು ಬಂದಿರುವ ವಿದ್ಯಾರ್ಥಿಗಳು ಹೆಜಮಾಡಿ ಟೋಲ್ ಗೇಟ್ ಬಳಿ ಪಟಾಕಿ ಸಿಡಿಸಿ ಹುಚ್ಚಾಟ ಮೆರೆದ ಘಟನೆ ಫೆಬ್ರವರಿ 4ರಂದು ಬುಧವಾರ ನಡೆದಿದೆ.ಎರಡು ಬಸ್ಸುಗಳಲ್ಲಿ ಆಗಮಿಸಿರುವ ವಿದ್ಯಾರ್ಥಿಗಳು ಟೋಲ್ ಗೇಟ್ ಬಳಿ ಬಸ್ ನಿಲ್ಲಿಸಿ ಮದ್ಯ ಸೇವಿಸಿ, ರಸ್ತೆ ಮಧ್ಯದಲ್ಲಿ ಪಟಾಕಿ ಸಿಡಿಸಿ ಹುಚ್ಚಾಟ ಮೆರೆದಿದ್ದಾರೆ.
ಯುವಕರ ಹುಚ್ಚಾಟದ ದೃಶ್ಯಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗಿದ್ದು, ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿವೆ.