ಹೆಬ್ರಿ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ: ನರೇಂದ್ರ ಅಧ್ಯಕ್ಷ, ಸುಕುಮಾರ್ ಪ್ರಧಾನ ಕಾರ್ಯದರ್ಶಿ

ಲೋಕಬಂಧು ನ್ಯೂಸ್, ಹೆಬ್ರಿ
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಹೆಬ್ರಿ ತಾಲೂಕು ಘಟಕದ 2025- 28ನೇ ಸಾಲಿನ ನೂತನ ಅಧ್ಯಕ್ಷರಾಗಿ 'ವಿಜಯವಾಣಿ' ವರದಿಗಾರ ನರೇಂದ್ರ ಎಸ್. ಮರಸಣಿಗೆ ಹಾಗೂ ಪ್ರಧಾನ ಕಾರ್ಯದರ್ಶಿಯಾಗಿ 'ಪ್ರಜಾವಾಣಿ' ವರದಿಗಾರ ಸುಕುಮಾರ್ ಮುನಿಯಾಲು ಆಯ್ಕೆಯಾಗಿದ್ದಾರೆ.ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಅಧ್ಯಕ್ಷತೆಯಲ್ಲಿ ಚುನಾವಣೆ ನಡೆಯಿತು.


ಕೋಶಾಧಿಕಾರಿಯಾಗಿ 'ವಿಜಯ ಕರ್ನಾಟಕ' ವರದಿಗಾರ್ತಿ ಸುಮಲತಾ ಹೆಬ್ಬಾರ್, ಉಪಾಧ್ಯಕ್ಷರಾಗಿ 'ವಿಜಯವಾಣಿ' ಪತ್ರಿಕೆಯ ಕೆ. ಸಂಜೀವ ಆರ್.ಡಿ. ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ 'ಉದಯವಾಣಿ' ವರದಿಗಾರ ಉದಯಕುಮಾರ್ ಶೆಟ್ಚಿ ಹಾಗೂ 'ಪಬ್ಲಿಕ್ ಆ್ಯಪ್' ವರದಿಗಾರ ಶ್ರೀದತ್ತ ಶೆಟ್ಟಿ ಆಯ್ಕೆಯಾದರು.


ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಇದ್ದರು.