ಕಾರ್ಕಳ ತಾಲೂಕು ಕಾರ್ಯನಿರತ ಪತ್ರಕರ್ತರ ಸಂಘ: ಮುಹಮ್ಮದ್ ಶರೀಫ್ ಅಧ್ಯಕ್ಷ, ಹರೀಶ್ ಪ್ರಧಾನ ಕಾರ್ಯದರ್ಶಿ

ಲೋಕಬಂಧು ನ್ಯೂಸ್, ಕಾರ್ಕಳ
ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಕಾರ್ಕಳ ತಾಲೂಕು ಘಟಕದ 2025- 28ನೇ ಸಾಲಿನ ನೂತನ ಅಧ್ಯಕ್ಷರಾಗಿ 'ವಾರ್ತಾಭಾರತಿ'ಯ ಮುಹಮ್ಮದ್ ಶರೀಫ್ ಮತ್ತು ಪ್ರಧಾನ ಕಾರ್ಯದರ್ಶಿಯಾಗಿ 'ಸಂಜೆಪ್ರಭ'ದ ಹರೀಶ್ ಪೂಜಾರಿ ಆಯ್ಕೆಯಾಗಿದ್ದಾರೆ.ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಅಧ್ಯಕ್ಷ ಸುಬ್ರಹ್ಮಣ್ಯ ಜಿ. ಕುರ್ಯ ಅಧ್ಯಕ್ಷತೆಯಲ್ಲಿ ಶನಿವಾರ ಇಲ್ಲಿನ ಪತ್ರಿಕಾ ಭವನದಲ್ಲಿ ಚುನಾವಣೆ ನಡೆಯಿತು.


ಉಪಾಧ್ಯಕ್ಷರಾಗಿ 'ವಿ ಫೋರ್' ಚಾನೆಲ್‌ನ ಕೆ.ಎಂ. ಖಲೀಲ್, ಕೋಶಾಧಿಕಾರಿಯಾಗಿ 'ಮಾಧ್ಯಮಬಿಂಬ'ದ ಸತೀಶ್ ಎಚ್. ಶೆಟ್ಟಿ, ಕಾರ್ಯದರ್ಶಿಯಾಗಿ 'ಉದಯವಾಣಿ'ಯ ಜಗದೀಶ್ ಹಾಗೂ ಕಾರ್ಯಕಾರಿಣಿ ಸಮಿತಿ ಸದಸ್ಯರಾಗಿ 'ನಮ್ಮ ಟಿವಿ'ಯ ಅರುಣ್ ಭಟ್, 'ಉದಯವಾಣಿ'ಯ ಅವಿನಾಶ್ ಬಿ., 'ಮಾಧ್ಯಮ ಬಿಂಬ'ದ ಹರೀಶ್ ಆಚಾರ್ಯ ಮತ್ತು 'ಪ್ರಜಾವಾಣಿ'ಯ ವಾಸುದೇವ ಭಟ್ ಅವಿರೋಧವಾಗಿ ಆಯ್ಕೆಯಾದರು.


ಉಡುಪಿ ಜಿಲ್ಲಾ ಕಾರ್ಯನಿರತ ಪತ್ರಕರ್ತರ ಸಂಘದ ಪ್ರಧಾನ ಕಾರ್ಯದರ್ಶಿ ನಝೀರ್ ಪೊಲ್ಯ ಇದ್ದರು.