ಎಸ್ಐಆರ್ ಪ್ರಶ್ನಿಸಿ ಖುದ್ದು ವಾದ ಮಂಡಿಸಿದ ಮಮತಾ ಬ್ಯಾನರ್ಜಿ!

ಲೋಕಬಂಧು ನ್ಯೂಸ್, ನವದೆಹಲಿ
ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನರ್ಜಿ ಫೆಬ್ರವರಿ 4ರಂದು ಬುಧವಾರ ಸುಪ್ರೀಂ ಕೋರ್ಟ್‌ನಲ್ಲಿ ಖುದ್ದು ವಾದ ಮಂಡಿಸಿ ಹೊಸ ದಾಖಲೆ ನಿರ್ಮಿಸಿದರು.ಕೇಂದ್ರ ಚುನಾವಣಾ ಆಯೋಗ ಪಶ್ಚಿಮ ಬಂಗಾಳವನ್ನು ಮತದಾರರ ಪಟ್ಟಿಯ ವಿಶೇಷ ಸಮಗ್ರ ಪರಿಷ್ಕರಣೆ (ಎಸ್ಐಆರ್) ಮೂಲಕ ಗುರಿಯಾಗಿಸುತ್ತಿದೆ. ಈ ವಿಚಾರದಲ್ಲಿ ತನಗೆ ಎಲ್ಲೂ ನ್ಯಾಯ ಸಿಗದ ಹಿನ್ನಲೆಯಲ್ಲಿ ತಾನೇ ಸ್ವತಃ ಸುಪ್ರೀಂ ಕೋರ್ಟ್ ಮೆಟ್ಟಿಲೇರಿರುವುದಾಗಿ ಮಮತಾ ಹೇಳಿದರು.


ನ್ಯಾಯಾಲಯ ಸಂಖ್ಯೆ 1ರ ಮೊದಲ ಸಾಲಿನಲ್ಲಿ ಹಾಜರಿದ್ದ ಟಿಎಂಸಿ ಮುಖ್ಯಸ್ಥೆ, ಹಿರಿಯ ವಕೀಲ ಶ್ಯಾಮ್ ದಿವಾನ್ ಸೇರಿದಂತೆ ಅವರ ವಕೀಲರ ತಂಡದೊಂದಿಗೆ ಸ್ವತಃ ಪ್ರಕರಣದಲ್ಲಿ ವಾದ ಮಂಡಿಸಿದರು. ಆ ಮೂಲಕ ಖುದ್ದು ಸುಪ್ರೀಂ ಕೋರ್ಟ್‌ಗೆ ಹಾಜರಾಗಿ ವಾದ ಮಂಡಿಸಿದ ಮೊದಲ ಮುಖ್ಯಮಂತ್ರಿ ಎಂಬ ದಾಖಲೆ ಬರೆದರು.