ಲೋಕಬಂಧು ನ್ಯೂಸ್, ಚಿಕ್ಕಮಗಳೂರು
ಧರ್ಮಸ್ಥಳ ಪ್ರಕರಣದ ತನಿಖೆ ನಡೆಸುತ್ತಿರುವ ವಿಶೇಷ ತನಿಖಾ ತಂಡ (ಎಸ್ಐಟಿ)ಕ್ಕೆ ತನಿಖೆ ಪೂರ್ಣಗೊಳಿಸಲು ಕಾಲಮಿತಿ ವಿಧಿಸಿಲ್ಲ. ಆದರೆ, ಆದಷ್ಟು ಬೇಗ ತನಿಖೆ ಪೂರ್ಣಗೊಳಿಸಲು ತನಿಖೆಯ ಆರಂಭದಲ್ಲೇ ಸೂಚಿಸಲಾಗಿದೆ ಎಂದು ಗೃಹ ಸಚಿವ ಡಾ.ಜಿ.ಪರಮೇಶ್ವರ ತಿಳಿಸಿದ್ದಾರೆ.ಸುದ್ದಿಗಾರರೊಂದಿಗೆ ಫೆಬ್ರವರಿ 6ರಂದು ಶುಕ್ರವಾರ ಮಾತನಾಡಿ, ಧರ್ಮಸ್ಥಳ ಪ್ರಕರಣಕ್ಕೆ ಸಂಬಂಧಿಸಿ ಎಸ್ಐಟಿ ಅಂತಿಮ ವರದಿ ಇನ್ನೂ ನೀಡಿಲ್ಲ. ಅವರು ಎಲ್ಲೆಲ್ಲಿ ಸಾಕ್ಷಿ ಕಲೆ ಹಾಕಬೇಕಿತ್ತೋ ಅಲ್ಲೆಲ್ಲಾ ಹೋಗಿ ತನಿಖೆ ಮಾಡಿದ್ದಾರೆ.
ಅವೆಲ್ಲವನ್ನೂ ಕ್ರೋಢೀಕರಿಸಿ ಶೀಘ್ರದಲ್ಲೇ ಅಂತಿಮ ವರದಿ ನೀಡುತ್ತಾರೆ. ಆಮೇಲೆ ವರದಿ ಬಹಿರಂಗಪಡಿಸುತ್ತೇವೆ ಎಂದರು.