ಸೇವಾತೀರ್ಥಕ್ಕೆ ಪಿಎಂಓ ಶಿಫ್ಟ್

ಲೋಕಬಂಧು ನ್ಯೂಸ್, ನವದೆಹಲಿ
ಸ್ವಾತಂತ್ರ್ಯಾನಂತರದ ಅತಿದೊಡ್ಡ ಆಡಳಿತಾತ್ಮಕ ಬದಲಾವಣೆಗಳಲ್ಲಿ ಒಂದಾಗಿರುವ ಪ್ರಧಾನಿ ಕಾರ್ಯಾಲಯದ ವಿಳಾಸ 76 ವರ್ಷಗಳ ಬಳಿಕ ಬದಲಾಗಿದೆ.
1947ರಿಂದ ದಕ್ಷಿಣ ಬ್ಲಾಕ್‌ನಲ್ಲಿ ಕಾರ್ಯನಿರ್ವಹಿಸುತ್ತಿದ್ದ ಪ್ರಧಾನಮಂತ್ರಿ ಕಾರ್ಯಾಲಯ (ಪಿಎಂಓ) ಇನ್ನು ಮುಂದೆ ನವದೆಹಲಿಯ ಕೇಂದ್ರ ಭಾಗದಲ್ಲಿರುವ ನೂತನ ಸಂಕೀರ್ಣ ‘ಸೇವಾ ತೀರ್ಥ’ಕ್ಕೆ ಸ್ಥಳಾಂತರಗೊಳ್ಳಲಿದೆ.ಉತ್ತರಾಯಣ ಪುಣ್ಯಕಾಲದಲ್ಲಿ ಪ್ರಧಾನಿ ನರೇಂದ್ರ ಮೋದಿ ಹೊಸ ಕಚೇರಿಗೆ ಅಧಿಕೃತವಾಗಿ ಪ್ರವೇಶಿಸಿದ್ದಾರೆ. ಸುಮಾರು 2 ಲಕ್ಷಕ್ಕೂ ಹೆಚ್ಚು ಚದರಡಿ ವಿಸ್ತೀರ್ಣ ಹೊಂದಿರುವ ಈ ಭವ್ಯ ಕಟ್ಟಡ ಅತ್ಯಾಧುನಿಕ ಸೌಲಭ್ಯಗಳು, ಉನ್ನತ ಭದ್ರತೆ ಹಾಗೂ ಭೂಕಂಪ ನಿರೋಧಕ ವಿನ್ಯಾಸ ಒಳಗೊಂಡಿದೆ.