ಲೋಕಬಂಧು ನ್ಯೂಸ್, ಮಂಗಳೂರು
ನೇಪಾಳದಲ್ಲಿ ಕುಳಿತು ಭಾರತೀಯರನ್ನು ಟಾರ್ಗೆಟ್ ಮಾಡಿ ನೂರಾರು ಕೋಟಿ ರೂ. ವಂಚಿಸುತ್ತಿದ್ದ ಬೃಹತ್ ಸೈಬರ್ ವಂಚಕರ ಜಾಲವನ್ನು ಮಂಗಳೂರು ನಗರ ಸೆನ್ ಕ್ರೈಂ ಪೊಲೀಸರು ಬೇಧಿಸಿ 11 ಮಂದಿ ಆರೋಪಿಗಳನ್ನು ಬಂಧಿಸಿದ್ದಾರೆ.
ಗುಜರಾತ್‌ನ ಮಕವನ್ ವಿಕ್ರಂ (25), ಪಶ್ಚಿಮ ಬಂಗಾಲದ ಸೌಮ್ಯಾದಿತ್ಯ ಚಟ್ಟೋಪಾಧ್ಯಾಯ (21), ಜಾರ್ಖಂಡ್‌ನ ಪುಪ್ಲ ಶಿವಕುಮಾರ್ (32), ರಾಜೇಶ್ ಮೆಂಡನ್ (30), ಮಿಥುನ್ ಕುಮಾರ್ (38), ಉತ್ತರ ಪ್ರದೇಶದ ಗೌರವ್ ಪಾಂಡೆ (24), ಹರ್ಷ ಮಿಶ್ರಾ (22), ನೌಷಾದ್ ಅಲಿ (34), ಮೊಹಮ್ಮದ್ ಆಕೀಬ್ (27), ಬಿಹಾರದ ರಾಜೀವ್ ರಂಜನ್ (30), ರಾಜಸ್ಥಾನದ ಓಂಪ್ರಕಾಶ್ ಯಾಧವ್ (32) ಬಂಧಿತರು.
