ಲೋಕಬಂಧು ನ್ಯೂಸ್, ಉಡುಪಿ
ಮಹಾಶಿವರಾತ್ರಿ ಅಂಗವಾಗಿ ಬ್ರಹ್ಮಕುಮಾರೀಸ್ ಮಣಿಪಾಲ ಶಾಖೆ ವತಿಯಿಂದ ಫೆಬ್ರವರಿ 8ರಂದು ವಿದ್ಯಾರ್ಥಿಗಳಿಗಾಗಿ ಉಡುಪಿ ತಾಲೂಕು ಮಟ್ಟದ ಶಿವಲಿಂಗ ಚಿತ್ರ ರಚನೆ ಸ್ಪರ್ಧೆ ಆಯೋಜಿಸಲಾಗಿದೆ.ಕಲಿಯುಗದ ಕತ್ತಲಲ್ಲಿ ಶಿವನ ಅವತರಣೆ ವಿಷಯದಲ್ಲಿ 4ರಿಂದ 7ನೇ ತರಗತಿ ವರೆಗೆ ಮೂರು ವಿಭಾಗಗಳಲ್ಲಿ ಚಿತ್ರ ರಚನಾ ಸ್ಪರ್ಧೆ ನಡೆಯಲಿದ್ದು, ಸ್ಪರ್ಧೆಯಲ್ಲಿ ಭಾಗವಹಿಸುವವರು ಫೆ.5ರೊಳಗೆ ಹೆಸರು ನೋಂದಾಯಿಸಬೇಕು.
ಸ್ಪರ್ಧೆಗೆ ಅಗತ್ಯ ಇರುವ ಡ್ರಾಯಿಂಗ್ ಶೀಟ್ ಹೊರತುಪಡಿಸಿ ಇತರ ಪರಿಕರಗಳನ್ನು ಸ್ಪರ್ಧಾಳುಗಳೇ ತರಬೇಕು. ಭಾಗವಹಿಸಿದ ಎಲ್ಲರಿಗೂ ಪ್ರಮಾಣಪತ್ರ ನೀಡಲಾಗುವುದು. ಹೆಚ್ಚಿನ ಮಾಹಿತಿಗಾಗಿ 9986211034 ಅಥವಾ 9481605622 ಯಾ 9964195028ನ್ನು ಸಂಪರ್ಕಿಸುವಂತೆ ಸಂಸ್ಥೆ ಪ್ರಕಟನೆ ತಿಳಿಸಿದೆ.
ಮಕ್ಕಳಿಗೆ ಸ್ಪರ್ಧೆ ವೇಳೆ ನಡೆಯುವ ರಾಜಯೋಗ ಧ್ಯಾನದಿಂದ ಸುಖೀ ಜೀವನ ಪ್ರವಚನದಲ್ಲಿ ಪೋಷಕರು ಭಾಗವಹಿಸಬಹುದು
