ಲೋಕಬಂಧು ನ್ಯೂಸ್ | ಪಡುಬಿದ್ರಿ, ಜೂ.18
ಇತಿಹಾಸ ಪ್ರಸಿದ್ಧ ಸಾಂತೂರು ಶ್ರೀ ಸುಬ್ರಹ್ಮಣ್ಯ ದೇವಸ್ಥಾನದಲ್ಲಿ ನಿರ್ಮಿಸಲುದ್ದೇಶಿಸಿರುವ ನೂತನ ಶಿಲಾಮಯ ಸುತ್ತುಪೌಳಿ ನಿರ್ಮಾಣದ ಪಾದುಕಾನ್ಯಾಸ ಕಾರ್ಯಕ್ರಮ ಕೃಷ್ಣಾಪುರ ಮಠಾಧೀಶ ಶ್ರೀ ವಿದ್ಯಾಸಾಗರತೀರ್ಥ ಶ್ರೀಪಾದರ ದಿವ್ಯೋಪಸ್ಥಿತಿಯಲ್ಲಿ ಕ್ಷೇತ್ರದ ಪ್ರಧಾನ ತಂತ್ರಿ ಬೆಳ್ಮಣ್ಣು ಸತೀಶ ತಂತ್ರಿ ಮಾರ್ಗದರ್ಶನದಲ್ಲಿ ಗುರುವಾರ ನಡೆಯಿತು.
ಬ್ರಹ್ಮಕಲಶೋತ್ಸವ ಸಮಿತಿಯ ಮುಂಬೈ ಘಟಕ ಅಧ್ಯಕ್ಷ ಸಾಂತೂರು ನಡಿಮನೆ ಚಂದ್ರಶೇಖರ ಶೆಟ್ಟಿ ಅಧ್ಯಕ್ಷತೆ ವಹಿಸಿದ್ದರು.
ಪ್ರಧಾನ ಅರ್ಚಕ ವಿಠಲ ಜೋಯಿಸ, ಅರ್ಚಕ ಗುರುರಾಜ ಜೋಯಿಸ, ಅನಂತ ತಂತ್ರಿ, ದಯಾನಂದ ಹೆಗ್ಡೆ ಸಾಂತೂರು ಪರಾರಿ, ರತ್ನಾಕರ ಶೆಟ್ಟಿ, ಸಾಮನಾಡಿಗುತ್ತು, ಡಾ.ಸುಧಾಕರ ಶೆಟ್ಟಿ ಕುಂದಬೆಟ್ಟು, ಶ್ರೀಕ್ಷೇತ್ರ ಗೆಜ್ಜೆಗಿರಿ ಗೌರವಾಧ್ಯಕ್ಷ ಸಾಂತೂರು ಗರಡಿಮನೆ ರಾಜಶೇಖರ ಕೋಟ್ಯಾನ್, ಬ್ರಹ್ಮಕಲಶೋತ್ಸವ ಮುಂಬೈ ಸಮಿತಿ ಕಾರ್ಯದರ್ಶಿ ಗೀತಾ ಶೆಟ್ಟಿ, ಸ್ಮಿತಾ ರಮೇಶ್ ಶೆಟ್ಟಿ, ದಾನಿಗಳಾದ ಜಯ ಶೆಟ್ಟಿ ಬಂಗ್ಲೆಮನೆ ಕಾರ್ಕಳ, ಕೆ. ಸಿ. ಕಾಮತ್ ಕಾಂಜರಕಟ್ಟೆ, ಅರುಣ್ ಶೆಟ್ಟಿ ಮೇಲ್ಮನೆ ಸಾಂತೂರು, ನವೀನಚಂದ್ರ ಸುವರ್ಣ ಅಡ್ವೆ, ಪ್ರತಾಪ್ ಶೆಣೈ ಕಾಂಜರಕಟ್ಟೆ ವೇದಿಕೆಯಲ್ಲಿದ್ದರು.
ರಘುಪತಿ ಜೋಯಿಸ ಮತ್ತು ಹರಿಕೃಷ್ಣ ತಂತ್ರಿ ವೇದಘೋಷಗೈದರು. ಶ್ರೀನಿವಾಸ ತಂತ್ರಿ ಸ್ವಾಗತಿಸಿ, ಬ್ರಹ್ಮಕಲಶೋತ್ಸವ ಸಮಿತಿ ಪ್ರಧಾನ ಕಾರ್ಯದರ್ಶಿ ಸುಬ್ರಹ್ಮಣ್ಯ ಭಟ್ ಪ್ರಾಸ್ತಾವನೆ ಗೈದರು. ದೇವಸ್ಥಾನದ ವ್ಯವಸ್ಥಾಪನಾ ಸಮಿತಿ ಅಧ್ಯಕ್ಷ ಸುಧೀರ್ ರಾವ್ ವಂದಿಸಿದರು. ಪಿಲಾರು ಸುಧಾಕರ ಶೆಣೈ ನಿರ್ವಹಿಸಿದರು.
.jpg)
.jpg)