ಲೋಕಬಂಧು ನ್ಯೂಸ್ ಬೆಂಗಳೂರು, ಜೂ.7
ಸಿಎಂ ಅಧಿಕಾರ ಸ್ವೀಕರಿಸಿದ ಬೆನ್ನಲ್ಲೇ ಸಿದ್ದರಾಮಯ್ಯ ಸರ್ಕಾರದಲ್ಲಿ ವಿಧಾನಸೌಧದ ವಿವಿಧ ಕಚೇರಿಗಳಿಗೆ ತಾತ್ಕಾಲಿಕವಾಗಿ ನಿಯೋಜನೆಗೊಂಡಿದ್ದ 250ಕ್ಕೂ ಹೆಚ್ಚು ಸಿಬ್ಬಂದಿಗೆ ಗೇಟ್ ಪಾಸ್ ನೀಡಲಾಗಿದೆ.ಆಪ್ತ ಸಹಾಯಕರು, ಶೀಘ್ರ ಲಿಪಿಗಾರರಿಂದ ಹಿಡಿದು ಡಿ-ಗ್ರೂಪ್ ನೌಕರರ ವರೆಗೆ ಹಲವರನ್ನು ಡಿಪಿಆರ್.ಎ ನಿರ್ದೇಶನದ ಮೇರೆಗೆ ಕರ್ತವ್ಯದಿಂದ ಬಿಡುಗಡೆಗೊಳಿಸಲಾಗಿದೆ.
ಹೊಸ ಸರ್ಕಾರ ಬಂದಾಗ ಹಳೆಯ ಸಿಬ್ಬಂದಿ ಬದಲಿಸುವುದು ಆಡಳಿತದ ಸಹಜ ಪ್ರಕ್ರಿಯೆ. ಮುಂದೆ ಅಗತ್ಯಕ್ಕೆ ತಕ್ಕಂತೆ ಸಿಬ್ಬಂದಿ ಮರುನೇಮಕ ಮಾಡಿಕೊಳ್ಳಲಾಗುವುದು ಎಂದು ಹಿರಿಯ ಅಧಿಕಾರಿಗಳು ಸ್ಪಷ್ಟಪಡಿಸಿದ್ದಾರೆ.